ಚಾಮರಾಜನಗರ:- ಏ.೦೯- ಚಾಮರಾಜನಗರ ಜಿಲ್ಲೆಯು ಉತ್ತಮ ಆಮ್ಲಜನಕ ಪಡೆಯುವ ಸ್ಥಳಗಲಲ್ಲಿ ದೇಶದಲ್ಲೇ ಮುಂಚುಣಿಯಲ್ಲಿದೆ. ಇದನ್ನು ಕಾಪಾಡಿಕೊಳ್ಳಬೇಕಾದರೆ ಗಿಡ,ಮರಗಳನ್ನು ನೆಟ್ಟು ಪೋಷಿಸುವುದು ಅವಶ್ಯಕವಾಗಿದೆ ಎಂದು ಚಾಮರಾಜನಗರ ಜಿಲ್ಲಾ ವಾಣಿಜ್ಯ ಸಂಸ್ಥೆ ಅಧ್ಯಕ್ಷ ವಿ.ಪ್ರಭಾಕರ್ ಅಭಿಪ್ರಾಯ ವ್ಯಕ್ತ ಪಡಿಸಿದರು.
ನಗರದ ಈಶ್ವರಿ ಸೋಷಿಯಲ್ ಟ್ರಸ್ಟ್ ವತಿಯಿಂದ ಸಂತೇಮರಳ್ಳಿ ರಸ್ತೆಯ ಅಧಿಶಕ್ತಿ ದೇವಸ್ಥಾನ ದಿಂದ ಉಪ್ಪಾರರ ರುದ್ರಭೂಮಿವರೆಗೆ ೧೦೦ ಸಾಲು ಗಿಡಗಳನ್ನು ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿಯೊಂದು ಜೀವಿಗಳ ಆರೋಗ್ಯದ ದೃಷ್ಠಿಯಿಂದ ಉತ್ತಮಗಾಳಿಗಾಗಿ ಗಿಡ,ಮರಗಳನ್ನು ಬೆಳೆಸಬೇಕು. ಹಲವು ಕಡೆ ಆಮ್ಲಜನಕವನ್ನು ಹಣಕೊಟ್ಟು ಉಪಯೋಗಿಸುವ ಪರಿಸ್ಥಿತಿಗೆ ಬಂದಿದೆ. ನಮ್ಮ ಜಿಲ್ಲೆಯಲ್ಲ್ಲಿ ಅತಿಹೆಚ್ಚು ಕಾಡು ಪ್ರದೇಶಗಳು ಇರುವ ಕಾರಣ ಉತ್ತಮ ಆಮ್ಲಜನಕ ಸಿಗುತ್ತಿದೆ. ಎಂದರು.
ಚಾಮರಾಜನಗರ ಜಿಲ್ಲೆಯ ವಾತಾವರಣದಲ್ಲಿ ಆಮ್ಲಜನಕವು ಇಡಿ ದೇಶದಲ್ಲೇ ೪.೫ರಷ್ಟು ಇತ್ತು. ಪ್ರಸ್ತುತ ಇದು ೧೦ಕ್ಕೆ ಹೋಗಿದೆ. ಮತ್ತೆ ನಾವು ಮೊದಲಿನ ಸ್ಥಾನ ಪಡೆಯಬೇಕಾದರೆ ಹೆಚ್ಚೆಚ್ಚು ಗಿಡ,ಮರಗಳನ್ನು ಬೆಳೆಸುವುದರಿಂದ ಹೆಚ್ಚು ಆಮ್ಲಜನಕ ಪಡೆಯಬಹುದಾಗಿದೆ ಎಂದರು.
ನಗರಸಭಾ ಅಧ್ಯಕ್ಷ ಸುರೇಶ್ ಮಾತನಾಡಿ ಗಿಡ.ಮರಗಳನ್ನು ಬೆಳೆಸುವುದರ ಮುಖಾಂತರ ಚಾಮರಾಜನಗರವನ್ನು ಗ್ರೀನ್ ಸಿಟಿ ಮಾಡಲು ಹೊರಟಿರುವ ಸಾಲುಮರದ ವೆಂಕಟೇಶ್ ಅವರ ಕೆಲಸವನ್ನು ಶ್ಲಾಘಿಸಿದರು. ಚಾಮರಾಜನಗರ ಜನತೆಯು ಸ್ವಚ್ಚತೆ ಕಡೆ ಗಮನವಿರಿಸಿ ಹಸಿಕಸ ಮತ್ತು ಒಣ ಕಸವನ್ನು ವಿಂಗಡಿಸಿ, ನಮ್ಮ ನಗರಸಭೆ ವಾಹನಕ್ಕೆ ನೀಡಿ ಪಟ್ಟಣವು ಸುಂದರವಾಗಿ ಕಾಣಲು ಸಹಕರಿಸಬೇಕೆಂದು ವಿನಂತಿಸಿದರು.
ಲಯನ್ಸ್ ಸಂಸ್ಥೆ ಅಧ್ಯಕ್ಷರಾದ ಡಾ. ಬಸವರಾಜೇಂದ್ರ ಮಾತನಾಡಿ ಉತ್ತಮವಾದ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಸ್ವಚ್ಚತೆಯು ಮಹತ್ತರವಾದ ಪಾತ್ರವನ್ನು ವಹಿಸುತ್ತದೆ. ಸುತ್ತಮುತ್ತಲಿನ ಪರಿಸರವು ಮನಯಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ವಾತಾವರಣವನ್ನು ಗಿಡಮರ ಬೆಳೆಸುವುದರಿಂದ ಹಾಗೂ ಸ್ವಚ್ಚತೆ ಕಾಪಾಡುವುದರಿಂದ ಉತ್ತಮ ಗಾಳಿಯನ್ನು ಪಡೆದು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದರು.
ಈ ಸಂದರ್ಭದಲ್ಲಿ ಚಾಮುಂಡೇಶ್ವರಿ ವಿದ್ಯುತ್ ಪ್ರಸರಣ ನಿಯಮಿತ ಲೆಕ್ಕಾಧಿಕಾರಿ ಎನ್.ಮಹೇಶ್, ಭಾಗ್ಯಲಕ್ಷಿö್ಮಮಹೇಶ್ ಆರ್.ಭಾಸ್ಕರ್, ಜಯಲಕ್ಷಿö್ಮವೆಂಕಟೇಶ್ ಹಾಗೂ ಇನ್ನು ಮುಂತಾದವರು ಇದ್ದರು
