ಕೊಳ್ಳೇಗಾಲ :ವಿಧಾನಸಭಾ ವ್ಯಾಪ್ತಿಗೆ ಸೇರಿದ ಸಿಲ್ಕಲ್ ಪುರ ಕುಂತೂರು ಗ್ರಾಮಗಳಲ್ಲಿ ಕೆ ಆರ್ ಐ. ಡಿ. ಎಲ್ ಎಸ್ ಇಪಿ ಯೋಜನೆಯ ಸುಮಾರು 45 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಎ. ಆರ್. ಕೃಷ್ಣಮೂರ್ತಿಯವರು ಭೂಮಿ ಪೂಜೆಯನ್ನು ನೆರವೇರಿಸಿದರು.
ಸಿಲ್ಕಲ್ ಪುರ ಗ್ರಾಮದ ಪರಿಶಿಷ್ಟ ಜಾತಿ ಬೀದಿಯಲ್ಲಿ 25 ಲಕ್ಷ ವೆಚ್ಚದಲ್ಲಿ ಸಿಸಿರಸ್ತೆ ಹಾಗೂ ಚರಂಡಿ ನಿರ್ಮಾಣ ಕುಂತೂರು ಗ್ರಾಮದ ಪರಿಶಿಷ್ಟ ಜಾತಿ ಬೀದಿಯಲ್ಲಿ 20 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ಶಾಸಕರು ಭೂಮಿ ಪೂಜೆಯನ್ನು ನೆರವೇರಿಸಿದರು.
ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಿ ಶಾಸಕರು ಮಾತನಾಡಿ ಎಸ್ ಇ ಪಿ ಯೋಜನೆಯಡಿ ಸಿಲ್ಕಲ್ ಪುರ ಗ್ರಾಮದಲ್ಲಿ 25 ಲಕ್ಷ ಅನುದಾನದಲ್ಲಿ ಸಿಸಿ ರಸ್ತೆ ಚರಂಡಿ ನಿರ್ಮಾಣ ಮತ್ತು ಕುಂತೂರು ಗ್ರಾಮದಲ್ಲಿ 20 ಲಕ್ಷಕ್ಕೆ ಸಿಸಿ ರಸ್ತೆ ಚರಂಡಿ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ನಡೆಸಲಾಗಿದೆ ಸಿ ಸಿ ರಸ್ತೆ ಚರಂಡಿ ನಿರ್ಮಾಣಕ್ಕೆ ಇಷ್ಟು ಹಣ ಸಾಲೋದಿಲ್ಲ ಕಾಮಗಾರಿ ಪ್ರಾರಂಭ ಹಂತದಲ್ಲಿದ್ದಾಗ ಮತ್ತಷ್ಟು ಅನುದಾನವನ್ನು ಕೊಡಿಸಲಾಗುವುದು
ಆದರೆ ಕಾಮಗಾರಿ ಭೂಮಿ ಪೂಜೆ ದಿನಾಂಕವನ್ನು ಮುಂದೂಡಲಾಗಿದೆ, ಮುಂದಿನ ದಿನಗಳಲ್ಲಿ ದಿನಾಂಕವನ್ನು ನಿಗದಿ ಮಾಡಿ ಗೊಬ್ಬಳಿಪುರ ಗ್ರಾಮದ ಭೂಮಿ ಪೂಜೆಯನ್ನು ನಡೆಸಲಾಗುವುರು ಎಂದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ರಾಜೇಂದ್ರ, ಕೆ. ಆರ್. ಐಡಿ ಎಲ್. ಅಧಿಕಾರಿ ಚಿಕ್ಕಲಿಂಗಯ್ಯ, ಇಂಜಿನಿಯರ್ ಪುನೀತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಪಿಡಿಓ ಮಲ್ಲೇಶ್, ಮಾಜಿ ಅಧ್ಯಕ್ಷ ಕುಂತೂರು ಗ್ರಾ. ಪಂ, ಶಿವಣ್ಣ ಹಾಗೂ ಗುತ್ತಿಗೆದಾರರು ಇದ್ದರು
