ಚಾಮರಾಜನಗರ. ಡಿ ೨೩ ಶಿಕ್ಷಣದ ಜೊತೆಯಲ್ಲಿ ಮನೋರಂಜನೆ ನೀಡುವುದರಿಂದ ಮಕ್ಕಳಿಗೆ ಉತ್ಸಾಹ ಹೆಚ್ಚುತ್ತದೆ ಹಾಗೂ ಬುದ್ದಿಯು ಚುರುಕಾಗುತ್ತದೆ ಎಂದು ನಾಗಸೇನಾ ಸೋಷಿಯಲ್ ಅಂಡ್ ಎಜುಕೇಷನಲ್ ಟ್ರಸ್ಟ್ ಕಾರ್ಯದರ್ಶಿ ಎಸ್.ಮಹದೇವಯ್ಯ ತಿಳಿಸಿದರು.
ನಗರದ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ಭಾನುವಾರ ಸಂಜೆ ನಡೆದ ಹಿಪ್ಪೋಕ್ಯಾಂಪಸ್ ಅಂಗ್ಲ ಮಾದ್ಯಮ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚಿಕ್ಕ ಮಕ್ಕಳ ಮನೋರಂನೆಯನ್ನು ನೋಡಲು ಬಹಳ ಸಂತೋಷವಾಗುತ್ತದೆ. ಪೋಷಕರು ಮಕ್ಕಳಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಶಾಲೆಗಳಲ್ಲಿ ನಡೆಯುವ ಚಟುವಟಿಕೆಗಳಿಗೆ ಅವರನ್ನು ಹೋಗಲು ಬಿಡಬೇಕು. ಎಷ್ಟೋ ಕಿರಿಯ ವಯಸ್ಸಿನ ಪ್ರತಿಭೆಗಳು ಟಿವಿ ಮಾದ್ಯಮಗಳಲ್ಲಿ ನೋಡುತ್ತಿದ್ದೇವೆ. ಮಕ್ಕಳಿಗೆ ವೇದಿಕೆಯ ಮೇಲೆ ಮಾತನಾಡುವ ಧೈರ್ಯ ಬರುವಂತೆ ಶಿಕ್ಷಕರು ಮತ್ತು ಪೋಷಕರು ಮಾಡಬೇಕು. ಎಂದು ಹೇಳಿದರು.
ಹಿಪ್ಪೋ ಕ್ಯಾಂಪಸ್ ಅಂಗ್ಲ ಮಾದ್ಯಮ ಶಾಲೆಯು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣವನ್ನು ನೀಡುವುದರ ಜೊತೆಯಲ್ಲಿ ಸಾಂಸ್ಕೃತಿಕವಾಗಿ ಮಕ್ಕಳು ಬೆಳೆಯಲು ಸಹಕಾರ ನೀಡುತ್ತಿದೆ ಎಂದು ತಿಳಿಸಿದರು.
ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಮಹದೇವಸ್ವಾಮಿ.ಎನ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮಕ್ಕಳ ಮೇಲಿನ ಹೊರೆಯಿಂದ ನುಣಿಚಿಕೊಳ್ಳಲು ಶಿಕ್ಷಕರ ಮೇಲೆ ಹೊರೆಯಾಕಬೇಡಿ, ಶಿಕ್ಷಕರ ಪಾತ್ರ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುವುದು, ಸಂಸ್ಕಾರಗಳನ್ನು ತಿಳಿಸಿಕೊಡುವುದು ಮಕ್ಕಳಿಗೆ ಮನೆಗಳಲ್ಲಿ ಮೊಬೈಲ್ ನಿಂದ ಆಟವಾಡುವುದು, ಕೆಟ್ಟ ಪದಗಳನ್ನು ಹಾಡುವುದರಿಂದ ಮಕ್ಕಳ ಮನಸ್ಸು ಬೇರೆಡೆಗೆ ಹೋಗಬಹುದು ಮನೆಗಳಲ್ಲಿ ಸಂಸ್ಕಾರದ ಜೊತೆಯಲ್ಲಿ ಮಕ್ಕಳಿಗೆ ನಮ್ಮ ದೇಶದ ಹಲವಾರು ಮಹಾನೀಯರ ಬಗ್ಗೆ ಸಣ್ಣ ವಯಸ್ಸಿನಲ್ಲಿ ತಿಳಿಸಿದರೆ ಮುಂದಿನ ವಿದ್ಯಾಭ್ಯಾಸಕ್ಕೆ ಸುಲಭವಾಗಲಿದೆ ಎಂದು ಹೇಳಿದರು.
ಸಿದ್ಧಾರ್ಥ ಪಿ.ಯು ಕಾಲೇಜ್ ಪ್ರಾಂಶುಪಾಲ ರಂಗಸ್ವಾಮಿ ಹಾಗೂ ಹಿಪ್ಪೋ ಕ್ಯಾಂಪಸ್ ಅಂಗ್ಲ ಶಾಲೆಯ ಮುಖ್ಯ ಶಿಕ್ಷಕಿ ಶೃತಿ.ಪಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕಿಯರಾದ ಶಶಿಕಲಾ.ಆರ್, ಶೋಭ.ಬಿ, ಪವಿತ್ರ, ಸುಕನ್ಯಾ.ಟಿ.ಎಸ್, ಕುಸುಮ ಮತ್ತು ಮಧುಶ್ರೀ, ಚಂದ್ರಕಲಾ, ಮಹೇಶ್ ಹಾಜರಿದ್ದರು.