Ticker

6/recent/ticker-posts

ಪ್ರತಿಯೊಬ್ಬರಿಗೂ ಒಳ್ಳೆಯದನ್ನು ಮಾಡಬೇಕು- ನಿವೃತ್ತ ಶಿಕ್ಷಕ ಬಿ.ಸುಜಯಕುಮಾರ್

ಚಾಮರಾಜನಗರ. ಡಿ ೨೧ ಪ್ರತಿಯೊಬ್ಬರಿಗೂ ಒಳ್ಳೆಯದನ್ನು ಮಾಡಬೇಕು. ಶಿಕ್ಷಕ ವೃತ್ತಿಯ ಪ್ರಾರಾಂಭದಿoದ ವಿದ್ಯಾರ್ಥಿಗಳಿಂದ ಪ್ರೀತಿ ಗೌರವಗಳು ವಿದ್ಯಾರ್ಥಿಗಳಿಂದ ಕಾಣುತ್ತಿತ್ತು. ಒಬ್ಬ ಗುರುವಿನಮೂಲ ತಿಳಿಯದ ವಿದ್ಯಾರ್ಥಿಗೆ ತಿಳಿಸಿಕೊಡುತದ್ದು. ನಮ್ಮ ಕರ್ತವ್ಯವಾಗಿದೆ ಎಂದು ವಯೋ ನಿವೃತ್ತಿ ಶಿಕ್ಷಕ ಬಿ.ಸುಜಯಕುಮಾರ್ ತಿಳಿಸಿದರು .

ನಗರದ ಜೋಡಿರಸ್ತೆಯಲ್ಲಿ ಇರುವ ರೋಟರಿಭವನದಲ್ಲಿ ಕ್ರಿಸ್ತರಾಜ ಬಾಲರ ಪಟ್ಟಣ ಶಾಲೆಯ ೧೮೮೩-೯೪ನೇ ಸಾಲಿನ ವಿದ್ಯಾರ್ಥಿಗಳಿಂದ  ಗುರುವಂದನೆ ಸುಧೀರ್ಘವಾಗಿ ಶಿಕ್ಷಕ ವೃತ್ತಿಯಲ್ಲಿ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿದ ಸುಜಯಕುಮಾರ್ ಅವರಿಗೆ ಗೌರವಿಸುವ ಉದ್ಘಾಟನೆ
ಕಾರ್ಯಕ್ರಮ ದಲ್ಲಿ ಗುರುವಂದನೆ ಸ್ವೀಕರಿಸಿ ಮಾತನಾಡಿದರು. 

ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಬೇಕು ಎಂದು ಬೆಳಗ್ಗೆ ಶಾಲೆಯ ಆವರಣದಲ್ಲಿ  ತರಗತಿಗಳನ್ನು ನಡೆಸುತ್ತದೆ. ಇದರಿಂದ ಹಲವಾರು ವಿದ್ಯಾರ್ಥಿಗಳು ಎತ್ತರದ ಮಟ್ಟಕ್ಕೆ ಬೆಳೆಯಲು ಸಾಧ್ಯವಾಯಿತು.

 ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವಲ್ಲಿ ಸುಖ ಬೇರೆಯಾವುದರಲ್ಲು ಸಿಗಲಾರದು.  ಎಷ್ಟೋ ಜನರೂ ವಿಒದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ದಾನದ ರೂಪದಲ್ಲಿ ನೀಡುವುದೇ ಅವರಿಗೆ ನಿಮ್ಮದಿ ಸಿಗಲಿ. ನನ್ನಮ್ಮೇಲೆ  ಭರವಸೆ ಇಟ್ಟು ಶಾಲೆಗೆ ಮುಖ್ಯಶಿಕ್ಷಕನಾಗಿ ಮಾಡಿದರು.

 ಅವರ ಮಾತಿನಂತೆ ಶಾಲೆಯಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತುಕೊಟ್ಟು ಶಾಲೆಗೆ ಕೀರ್ತಿತರುವ ನಿಟ್ಟಿನಲ್ಲಿ ಸೇವೆ ಮಾಡಿದೆ.  ನನ್ನ ಉದ್ದೇಶ ಎಲ್ಲಾ ವಿದ್ಯಾರ್ಥಿಗಳ ಜೊತೆ ಸಂಪರ್ಕದಲ್ಲಿ ಇರಬೇಕು ಎಂಬುದೇ ನನ್ನ ಆಸೆಯಾಗಿದೆ ಎಂದರು.

ನನ್ನ ೨೫ ವರ್ಷ ಶಿಕ್ಷಕನಾಗಿ ಸಾಗಿದ ದಿನಗಳೆ ನನಗೆ ಗೊತ್ತಾಗಲಿಲ್ಲ, ಕೆಲವು ವಿದ್ಯಾರ್ಥಿಗಳು ನಮ್ಮ ಕೋಣೆಯಲ್ಲೆ ಇದ್ದು ವಿದ್ಯಾಭ್ಯಾಸ ಪಡೆಯುತ್ತಿದ್ದರು. ಅವರಿಗೆ ಎಲ್ಲತರಹದ ಸೌಲಭ್ಯಗಳನ್ನು ನನಗೆ ಬರುವ ಸಂಬಳದಲ್ಲೆ ಮಾಡುತ್ತಿದೆ. ಆ ವಿದ್ಯಾರ್ಥಿಗಳು ದೋಡ್ಡ ಹುದ್ದೆಗಳಲ್ಲಿ ಸೇವೆ ನೀಡುತ್ತಿದ್ದಾರೆ ಅದು ನನಗೆ ತೃಪ್ತಿತಂದಿದೆ. ಹಳೆಯ ವಿದ್ಯಾರ್ಥಿಗಳು ವಿದ್ಯೇ ಕಲಿಸಿದ ಗುರುಗಳನ್ನು ನೆನೆದು ಗುರುವಂದನೆ ಮಾಡುತ್ತಿರುವುದು ಬಹಳ ಸಂತೋಷದ ವಿಷಯ ಎಂದು ಹೇಳಿದರು.

ಆಶಾಯ ನುಡಿಗಳನ್ನು ಹಾಡಿದ ಶಿಕ್ಷಕ್ಷ ರೇವಣ್ಣ ಮಾತನಾಡಿ ನಿವೃತ್ತಿ ಹೊಂದಿದ ಗುರುಗಳು ಹಲವಾರು ವಿದ್ಯಾರ್ಥಿಗಳಿಗಳಿಗೆ ದಾರಿದೀಪವಾಗಿದ್ದಾರೆ ವಿಜ್ಞಾನದ ಶಿಕ್ಷಕರಾಗಿ ಹಾಗೂ ಕ್ರೀಡಾ ಶಿಕ್ಷಕರಾಗಿ ವಿದ್ಯಾರ್ಥಿಗಳಿಗೆ  ಪ್ರೊತ್ಸಾಹ ನೀಡುವುದರ ಜೊತೆಗೆ ವಿದ್ಯಾಭ್ಯಾಸಕ್ಕೆ ಸಹಾಯವನ್ನು ಮಾಡುತ್ತಿದ್ದರು ಇವರು ನೀಡಿರುವ ಶಿಕ್ಷಣದಿಂದ ಹಲವಾರು ವಿದ್ಯಾರ್ಥಿಗಳು ಉತ್ತಮ ಕ್ಷೇತ್ರದಲ್ಲಿ ಸೇವೆ ನೀಡುತ್ತಿದ್ದಾರೆ ಎಂದು ಹೇಳಿದರು

ಹಳೆಯ ವಿದ್ಯಾರ್ಥಿ ಜಯಶೀಲ ಮಾತನಾಡಿ ವಿದ್ಯಾರ್ಥಿಗಳಿಗೆ ಶಿಕ್ಷಕರ ಮೇಲೆ ಗೌರವವಿರಬೇಕು. ಅವರು ನೀಡುವ ಶಿಕ್ಷಣದಿಂದ ಮಾತ್ರ ಉತ್ತಮ ವಿದ್ಯಾರ್ಥಿಯಾಗಲು ಸಾಧ್ಯ ಬಾಲರಪಟ್ಟಣ ಶಾಲೆಯಲ್ಲಿ ಶಿಸ್ತು ಸಮ್ಯಮದ  ಜೊತೆಗೆ ಶಿಕ್ಷಣಕ್ಕೂ ಮುಖ್ಯವಾಗಿ  ಶಿಕ್ಷಕರು ಶಿಕ್ಷಣ  ನೀಡುತ್ತಿದ್ದರು, ಎಲ್ಲಾ ವಿದ್ಯಾರ್ಥಿಗಳ ಜೊತೆ ಪ್ರೀತಿಪಾತ್ರರಾಗಿದ್ದರು ಎಂದು ತಿಳಿದರು.

ಹಳೆ ವಿದ್ಯಾರ್ಥಿಗಳ ಸಂಘದ ರೀನಾ, ಸಿದ್ದರಾಜು, ಶಿವಕುಮಾರ್, ಮಹದೇವಸ್ವಾಮಿ, ಮಲ್ಲೇಶ್, ರಾಜು, ಕುಮಾರಸ್ವಾಮಿ, ಕುಮಾರ.ಆರ್.ಎಸ್, ಶೇಷಾದ್ರಿ, ಅಭೀಷೇಕ್, ಮಂಜುನಾಥ್,  ಮಲ್ಲಿಕಾರ್ಜುನ್, ನಾಗರಾಜು, ಮಹೇಶ್.ಪಿ.ಟಿ ಉಪಸ್ಥಿತರಿದ್ದರು.