Ticker

6/recent/ticker-posts

ನಾಗಮಂಗಲ ತಾಲೂಕಿನ ರೈತರ ಒಡನಾಡಿಯಾಗಿ ಸೇವೆ ಮಾಡುವ ಉದ್ದೇಶ: ಮಹಾಬಲೇಶ


*ತಾಲೂಕಿನ ಕೃಷಿಕ ಸಮಾಜದ ಸರ್ವ ಸದಸ್ಯರಿಗೂ ಕೃತಜ್ಞತೆ ಯೊಂದಿಗೆ ರೈತರ ಬಲ ವರ್ಧನೆಗೆ ಒತ್ತಾಸೆ*


ನಾಗಮಂಗಲ. ಡಿ:-18. ತಾಲೂಕಿನ ರೈತರ ಒಡನಾಡಿಯಾಗಿ ಸೇವೆ ಮಾಡುವ ಉದ್ದೇಶದ ನಮ್ಮ ಗುರಿಯಾಗಿದೆ ಎಂದು ತಾಲೂಕು ಕೃಷಿಕ ಸಮಾಜದ ಮಾಜಿ ಉಪಾಧ್ಯಕ್ಷರಾದ ಮಹಾಬಲೇಶ್ ತಿಳಿಸಿದರು.


ಅವರು ಇಂದು ನಾಗಮಂಗಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು.


 ತಾಲೂಕ ಕೃಷಿಕ ಸಮಾಜದ ಸರ್ವ ಸದಸ್ಯರು ಮತ್ತು ಕೃಷಿಕ ಸಮಾಜದ ಅಭಿಮಾನಿಗಳು ನಾಗಮಂಗಲ ತಾಲೂಕಿನಲ್ಲಿ 24ನೇ ಸಾಲಿನಲ್ಲಿ ನಡೆದ ಕೃಷಿಕ ಸಮಾಜದ ಚುನಾವಣೆಗೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ನಮಗೆ 
ಸಹಕಾರ  ಮಾಡಿರುವುದಕ್ಕೆ ತಾಲೂಕಿನ ಕೃಷಿ ಮತದಾರ ಬಂಧುಗಳಿಗೆ ನಮ್ಮಗಳ ಕೃತಜ್ಞತೆಯನ್ನು ತಿಳಿಸುತ್ತೇವೆ.

ನಾಗಮಂಗಲ ತಾಲೂಕಿನ ಕೃಷಿಕ ಸಮಾಜದಲ್ಲಿ ನಡೆದ ಚುನಾವಣೆ ಸೋಲು ಗೆಲುವುಗಳನ್ನ ಸಮಾನವಾಗಿ ಸ್ವೀಕರಿಸಿ ನಾನು ನನ್ನದೇ ಪ್ರತಿಷ್ಠೆ ಎಂಬ ಭಾವನೆಯನ್ನು ನಮ್ಮಗಳಲ್ಲಿ ಇರದೆ ನಮಗೆ ತಾಲೂಕಿನ ಕೃಷಿ ಬಾಂಧವರು ಮತ ನೀಡಿರುವುದಕ್ಕೆನಾವುಗಳು ಮರೆಯುವಂತಿಲ್ಲ ಕೃಷಿ ಕಾಯಕದವರ ಸೇವಕನಾಗಿ ಕೃಷಿ ಕ್ಷೇತ್ರದ ಪೂರಕವಾಗಿ ಅನುಕೂಲವಾಗುವ ನಿಟ್ಟಿನಲ್ಲಿ ಕೃಷಿಕರನ್ನು ಒಗ್ಗೂಡಿಸುವ ವೇದಿಕೆಯೊಂದಿಗೆ ಕೃಷಿಕರಿಗೆ ಸವಲತ್ತುಗಳು ಕೃಷಿ ಯೋಜನೆಗಳ ಬಗ್ಗೆ ಅರಿವು  ಒದಗಿಸುವ ಪ್ರಾಮಾಣಿಕ ಪ್ರಯತ್ನದ ವ್ಯವಸ್ಥೆ ಮಾಡಿಸುವ ನಮ್ಮಗಳ ಕನಸಾಗಿದ್ದು ಮುಂದಿನ ದಿನಗಳಲ್ಲಿ ಕಾರ್ಯ ಚಟುವಟಿಕೆ ಆರಂಭಿಸುವ ಪ್ರಯತ್ನ ಮಾಡುವ ಹಂಬಲವಿದ್ದು ಇದಕ್ಕೆ ತಾಲೂಕಿನ ಕೃಷಿ ಬಾಂಧವರು ಸಹಕಾರ ನೀಡಬೇಕೆಂದು ತಿಳಿಸಿದರು.

ತಾಲೂಕು ಕೃಷಿ ಸಮಾಜ ರೈತ ಸಮುದಾಯವನ್ನು ಜೊತೆಯಲ್ಲಿಯೇ ಸಾಗುವ ಪ್ರಯತ್ನವಿದ್ದು ಒಬ್ಬರ ಹಿಡಿತದಲ್ಲಿ ಇರದೆ ಕೃಷಿಕರ ಸ್ವತ್ತು ಇದಾಗಿದ್ದು ಇಂತಹ ಕೃಷಿಕ ಸಮಾಜಕ್ಕೆ ಪ್ರಜ್ಞಾವಂತ ಹಿರಿಯ ಕೃಷಿಕರನ್ನು ರಾಜ್ಯಾಧ್ಯಕ್ಷರನ್ನು ನೇಮಕ ಮಾಡುವುದರಿಂದ ರಾಜ್ಯಕ್ಕೆ ಜಿಲ್ಲೆ ತಾಲೂಕು ಘಟಕಗಳಿಗೆ ಪುನಶ್ಚೇತನ ನೀಡುವಂತಹ ವ್ಯವಸ್ಥೆ ಆಗುತ್ತದೆ. ಎಂಬುದು ನಮ್ಮಗಳ ಆಶಯವಾಗಿದೆ.

ಆದ್ದರಿಂದ ನಮ್ಮವರೇ ಆದ ನಮ್ಮ ತಾಲೂಕಿನ ಕೃಷಿ ಸಚಿವರಾದ ಚೆಲುವರಾಯಸ್ವಾಮಿ ಯವರು ಕರ್ನಾಟಕ ಪ್ರದೇಶ ಕೃಷಿಕ ಸಮಾಜಕ್ಕೆ ಪ್ರಜ್ಞಾವಂತ ಹಿರಿಯ ಕೃಷಿಕರನ್ನು ನೇಮಕ ಮಾಡಬೇಕೆಂದು ಈ ಸಂದರ್ಭದಲ್ಲಿ ತಾಲೂಕಿನ ಕೃಷಿ ಬಾಂಧವರ ಪರವಾಗಿ ನಮ್ಮಗಳ  ಪರವಾಗಿ ಒತ್ತಾಯ ಮಾಡುತ್ತೀವಿ.

ಇದೇ ಸಂದರ್ಭದಲ್ಲಿ ತಾಲೂಕು ಕೃಷಿಕ ಸಮಾಜದ ಮಾಜಿ ಸದಸ್ಯರಾದ ಪುಟ್ಟರಾಜು ರವರು ಉಪಸ್ಥಿತರಿದ್ದರು.