ಚಾಮರಾಜನಗರ :-ಧ್ಯಾನವು ಮಾನಸಿಕ ಆರೋಗ್ಯ ಕ್ಕೆ ಹಾಗೂ ಯೋಗವು ದೈಹಿಕ ಆರೋಗ್ಯ ಕ್ಕೆ ಅವಶ್ಯಕ ವಾಗಿರುತ್ತದೆ ಎಂದು ಪತಂಜಲಿ ಯೋಗ ಶಿಕ್ಷಣ ಸಮಿತಿ ಜಿಲ್ಲಾ ಶಾಖೆ ಅದ್ಯಕ್ಷರಾದ ಹೆಚ್. ಜಿ. ಶಿವಕುಮಾರ ಸ್ವಾಮಿ ತಿಳಿಸಿದರು,
ನಗರದ ಸೇವಾ ಭಾರತಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಶನಿವಾರ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಜಿಲ್ಲಾ ಶಾಖೆ ಆಯೋಜಿಸಿದ್ದ ವಿಶ್ವ ಧ್ಯಾನ ದಿನ ಹಾಗೂ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಜಿಲ್ಲಾ ಸಮಿತಿಯ ವತಿಯಿಂದ ವಿಶ್ವ ಧ್ಯಾನ ದಿನಾಚರಣೆ ಆಚರಿಸಲಾಯಿತು.
ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಮಾತನಾಡಿದರು. ಇಂದು ವಿಶ್ವ ದಾದ್ಯಂತ ೧೯೭ ದೇಶಗಳು ಧ್ಯಾನ ದಿನವನ್ನಾಗಿ ಆಚರಿಸುತ್ತಿದ್ದೆ. ಇದು ವಿಶ್ವಕ್ಕೆ ಭಾರತದ ಕೊಡುಗೆ ಯಾಗಿದೆ ಎಂದರು. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಯೋಗ ಮತ್ತು ಧ್ಯಾನ ಮಾಡುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಂಡು ಹೋಗಬಹುದು ಎಂದರು.
"ಧ್ಯಾನವು ಮಾನಸಿಕ ಏಕಾಗ್ರತೆಯ ಆರೋಗ್ಯಕ್ಕೆ ಹಾಗೂ ಯೋಗವು ದೈಹಿಕ ಆರೋಗ್ಯಕ್ಕೆ ಅವಶ್ಯಕ ವಾಗಿರುತ್ತದೆ " ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಹಲವು ಯೋಗಾಭ್ಯಾಸ ಮಾಡಿ, ಪ್ರಾಣಾಯಾಮ ಮತ್ತು ಧ್ಯಾನ ಅಭ್ಯಾಸ ಮಾಡಲಾಯಿತು.
ಸಮಿತಿಯ ಅಧ್ಯಕ್ಷರಾದ ಶಿವಕುಮಾರ ಅಣ್ಣ ಶಿಕ್ಷಕರಾದ ಸುರೇಶಣ್ಣ ಯೋಗ ಬಂಧುಗಳಾದ ವೆಂಕಟೇಶಣ್ಣ ಅನಿಲಣ್ಣ ಅಶ್ವಿನಿ ಅಕ್ಕ ಲಕ್ಷ್ಮಿ ಅಕ್ಕ ಗಾಯತ್ರಿ ಅಕ್ಕ ಸುವರ್ಣ ಅಕ್ಕ ಕೃಷ್ಣವೇಣಿ ಅಕ್ಕ ಹಾಗೂ ಇನ್ನೂ ಹಲವು ಯೋಗ ಬಂದುಗಳು ಈ ಸಮಯದಲ್ಲಿ ಉಪಸ್ಥಿತರಿದ್ದರು