Ticker

6/recent/ticker-posts

*ಡಾ. ಎಚ್.ಪಿ. ಚಂದ್ರಕಲಾ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯದ* *ಪಿಎಚ್.ಡಿ. ಪದವಿ ಪ್ರದಾನ


 ​ಕೆ.ಎಂ ದೊಡ್ಡಿ :-ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಹಾಗೂ ಹಿತಾಸಕ್ತ ಶೈಕ್ಷಣಿಕ ಸಾಧಕಿ ಡಾ. ಎಚ್.ಪಿ. ಚಂದ್ರಕಲ ಅವರು ಮಂಡಿಸಿದ ಸಂಶೋಧನಾ ಮಹಾಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾನಿಲಯವು ಪಿಎಚ್.ಡಿ. ಪದವಿ ಪ್ರದಾನ ಮಾಡಿ ಅಂಗೀಕಾರ ನೀಡಿದೆ.

​ಭಾರತೀ ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರದ ಕನ್ನಡ ವಿಭಾಗದ ಹಿರಿಯ ಪ್ರಾಧ್ಯಾಪಕ ಹಾಗೂ ಸಹ ಪ್ರಾಧ್ಯಾಪಕರಾದ ಡಾ. ಆರ್.ಸಿ. ದೇವರಾಜು ಅವರ ಸಮರ್ಥ ಮಾರ್ಗದರ್ಶನದಲ್ಲಿ ಡಾ. ಚಂದ್ರಕಲ ಅವರು ಈ ಸಂಶೋಧನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.

​
ಡಾ. ಚಂದ್ರಕಲಾರವರು ಕನ್ನಡ ಸಾಹಿತ್ಯ ಲೋಕದ ಹೆಸರಾಂತ ಬರಹಗಾರರಾದ ‘ಕೆ.ಎನ್. ಗಣೇಶಯ್ಯ ಅವರ ಕಥನ ಸಾಹಿತ್ಯ’ ಎಂಬ ವಿಷಯದ ಕುರಿತು ಆಳವಾದ ಅಧ್ಯಯನ ನಡೆಸಿ, ತಮ್ಮ ಸಂಶೋಧನಾ ಮಹಾಪ್ರಬಂಧವನ್ನು ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿದ್ದರು. ಈ ಪ್ರಬಂಧವನ್ನು ಪರಿಶೀಲಿಸಿದ ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿಗೆ ಅರ್ಹವೆಂದು ಅಧಿಕೃತವಾಗಿ ಘೋಷಿಸಿದೆ.

​ಶಿಕ್ಷಣ ಕ್ಷೇತ್ರದಲ್ಲಿ ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಿರುವ ಡಾ. ಚಂದ್ರಕಲಾ ಅವರು, ಬೋಧನೆಯ ಜೊತೆಗೆ ಸಾಹಿತ್ಯಕ ಸಂಶೋಧನೆಯಲ್ಲಿ ತೊಡಗಿರುವುದು ಅವರ ಶೈಕ್ಷಣಿಕ ಬದ್ಧತೆಗೆ ಹಿಡಿದ ಕನ್ನಡಿಯಾಗಿದೆ ಹಾಗೂ ಅವರ ಕಿರೀಟಕ್ಕೆ ಮತ್ತೊಂದು ಗರಿಮೆ ಲಭಿಸಿದಂತಾಗಿದೆ.

​ *ಗಣ್ಯರಿಂದ  ಅಭಿನಂದನೆ:-* 

ಡಾ. ಎಚ್.ಪಿ. ಚಂದ್ರಕಲಾ ಅವರು ಮನ್ಮುಲ್ (ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ) ಅಧ್ಯಕ್ಷರಾದ ಹರೀಶ್ ಬಾಬು ಅವರ ಧರ್ಮಪತ್ನಿಯಾಗಿದ್ದಾರೆ. ತಮ್ಮ ಶ್ರಮ ಹಾಗೂ ಸತತ ಅಧ್ಯಯನದ ಮೂಲಕ ಪಿಎಚ್.ಡಿ. ಪದವಿ ಪಡೆದಿರುವ ಇವರ ಈ ಸಾಧನೆಗೆ ಮನ್ಮುಲ್ ಅಧ್ಯಕ್ಷ ಹರೀಶ್ ಬಾಬು, ಕುಟುಂಬಸ್ಥರು, ಆತ್ಮೀಯ ಸ್ನೇಹಿತರು, ಕಾಲೇಜಿನ ಸಹೋದ್ಯೋಗಿ ವೃಂದ ಹಾಗೂ ಹಿತೈಷಿಗಳು ಹರ್ಷ ವ್ಯಕ್ತಪಡಿಸಿ, ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

 *ವರದಿ ;- ಸಂತೋಷ್ ಟಿಬಿ*