ಮಲ್ಕುಂಡಿ:- ಇತ್ತೀಚಿನಗೆ ದೇವರಾಯಶೆಟ್ಟಿಪುರ ಗ್ರಾಮದ ರೈತ ಶಿವಕುಮಾರ್ ಎಂಬುವವರನ್ನು ಬಲಿ ಪಡೆದಿದ ಪುಂಡಾನೆಯನ್ನು ಇಂದು ನಾಗಣಾಪುರ ಬಳಿ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಎರಡು ದಿನಗಳಿಂದ ದಸಾರ ಆನೆಗಳ ಮೂಲಕ ಕಾರ್ಯಚರಣೆ ನಡೆಸಿದ ಅರಣ್ಯ ಇಲಾಖೆ ಪುಂಡಾನೆಯನ್ನು ಸೆರೆ ಹಿಡಿಯಲಾಗಿದೆ.
ಓಂಕಾರ ಅರಣ್ಯ ವ್ಯಾಪ್ತಿಯ ದೇವರಾಯಶೆಟ್ಟಿಪುರ,ನಾಗಣಾಪುರ,ಬಳ್ಳೂರಹುಂಡಿ, ಗ್ರಾಮಗಳ ವ್ಯಾಪ್ತಿಯ ರೈತರ ನಿದ್ದೆಗೆಡಿಸಿದ ಪುಂಡಾನೆಯನ್ನು ಸೆರೆ ಹಿಡಿದಿರುವುದ್ದರಿಂದ ರೈತರು ನಿಟ್ಟುಸಿರು ಬಿಟ್ಟಿದ್ದಾರೆ.
ರೈತರು ತಮ್ಮ ಜಮೀನಿಗೆ ಹೋಗಿ ಕೆಲಸ ಮಾಡಲು ಭಯಬೀತರಾಗಿದ್ದರು.ರೈತ ಶಿವಕುಮಾರ್ ಎಂಬುವವರನ್ನು ಬಲಿ ಪಡೆದ ಕಾಡಾನೆಯನ್ನು ಸೆರೆ ಹಿಡಿಯಬೇಕೆಂದು ರೈತರು ಒತ್ತಾಯಿಸಿದರು.
ರೈತರ ಒತ್ತಾಯಕ್ಕೆ ಮಣಿದ ಶಾಸಕ ದರ್ಶನ್ ಧ್ರುವನಾರಾಯಣ್ ಅವರು ಕೊಡಲ್ಲೇ ಕಾಡಾನೆಯನ್ನು ಸೆರೆ ಹಿಡಿಯಬೇಕು ಎಂದು ಅರಣ್ಯ ಅಧಿಕಾರಿಗಳಿಗೆ ಸಲಹೆ ನೀಡಿದರು.
ಅರಣ್ಯ ಅಧಿಕಾರಿಗಳು ಸಿಬ್ನಂದಿಗಳೊಡನೆ 2 ದಿನ ಕಾರ್ಯಚರಣೆ ನಡೆಸಿ ಆನೆಯನ್ನು ಸೆರೆ ಹಿಡಿಯಲಾಗಿದೆ.ಆನೆಯನ್ನು ಸುರಕ್ಷಿತ ಸ್ಥಳಕ್ಕೆ ಬಿಡಲಾಗುವುದು ಎಂದು ಅರಣ್ಯ ಅಧಿಕಾರಿ ತಿಳಿಸಿದ್ದಾರೆ
