ಬೇಲೂರು : ಜಗತ್ಪ್ರಸಿದ್ಧ ಮೈಸೂರು ಮಹೋತ್ಸವದ ಅಂಗವಾಗಿ ನಡೆಯುವ ಮೈಸೂರು ದಸರಾ ಕವಿಗೋಷ್ಠಿಗೆ ಬೇಲೂರಿನ ಕವಯಿತ್ರಿ,ಲೇಖಕಿ, ಕಾದಂಬರಿಗಾರ್ತಿ ಪಲ್ಲವಿ ಬೇಲೂರು ಆಯ್ಕೆಯಾಗಿದ್ದಾರೆ.
ಪಲ್ಲವಿ ಬೇಲೂರು ರವರ ಅಭಿಸಾರಿಕೆ ಮತ್ತು ಚೈತಾಗ್ನಿ ಕವನ ಸಂಕಲನಗಳು ಹಾಗೂ ಲಾಂದ್ರ ಕಾದಂಬರಿಗಳು ಪ್ರಕಟವಾಗಿ ಜನಮನ್ನಣೆ ಗಳಿಸಿವೆ.
ಸಾಹಿತ್ಯ ಕ್ಷೇತ್ರದಲ್ಲಿ ಹಲವಾರು ಪ್ರಶಸ್ತಿಗಳನ್ನ ಗಳಿಸಿರುವ ಇವರು ಮೈಸೂರು ದಸರಾ ಕವಿಗೋಷ್ಠಿಗೆ ಆಯ್ಕೆ ಆಗಿರುವುದಕ್ಕೆ ಬೇಲೂರಿನ ಕನ್ನಡ ಸಾಹಿತ್ಯ ಪರಿಷತ್ತು, ಕವಿ ಕಾವ್ಯ ಸುಧೆ , ದೇಶಭಕ್ತರ ಬಳಗ ,
ಶಿಕ್ಷಕ ಸಂಘಟನೆಗಳು, ಹಾಗೂ ಸಾಹಿತ್ಯಾಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
