Ticker

6/recent/ticker-posts

ಕೈಗಾರಿಕೆ–ಶೈಕ್ಷಣಿಕ ಸಹಯೋಗ ಬಲಪಡಿಸಲು ಎಸ್‌ಎಸ್‌ಐಟಿ ಮತ್ತು ಸಿಎಮ್‌ಟಿಐ ನಡುವೆ ಒಪ್ಪಂದ


ತುಮಕೂರು: ಶ್ರೀ ಸಿದ್ಧಾರ್ಥ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (SSIT), ತುಮಕೂರು, ಇದರ ಸಿವಿಲ್ ಎಂಜಿನಿಯರಿಂಗ್ ವಿಭಾಗ ಹಾಗೂ ಇಂಡಸ್ಟ್ರಿ ಇನ್‌ಸ್ಟಿಟ್ಯೂಟ್ ಇಂಟರ್ಯಾಕ್ಷನ್ ಸೆಲ್ (-(ಐಐಐಸಿ-IIIC) ಸಹಯೋಗದಲ್ಲಿ, ಬೆಂಗಳೂರಿನ ಸೆಂಟ್ರಲ್ ಮ್ಯಾನುಫ್ಯಾಕ್ಚರಿಂಗ್ ಟೆಕ್ನಾಲಜಿ ಇನ್‌ಸ್ಟಿಟ್ಯೂಟ್ (CMTI) ಜೊತೆ ಮಹತ್ವದ *ಸಹಯೋಗ ಒಪ್ಪಂದ (MoU)ಕ್ಕೆ ಸಹಿ ಹಾಕಲಾಯಿತು.

ಈ ಒಪ್ಪಂದದ ಮುಖ್ಯ ಉದ್ದೇಶವು ಕೈಗಾರಿಕೆ–ಶೈಕ್ಷಣಿಕ ಸಂಸ್ಥೆಗಳ ನಡುವಿನ ಸಹಯೋಗವನ್ನು ಬಲಪಡಿಸುವುದು ಹಾಗೂ ಉದಯೋನ್ಮುಖ ತಂತ್ರಜ್ಞಾನಗಳು, ತಾಂತ್ರಿಕ ಆವಿಷ್ಕಾರಗಳು ಮತ್ತು ನವೀನ ಆಲೋಚನೆಗಳ ಕುರಿತು ಜ್ಞಾನ ವಿನಿಮಯವನ್ನು ಉತ್ತೇಜಿಸುವುದಾಗಿದೆ. ಈ ಸಹಯೋಗದ ಮೂಲಕ ವಿದ್ಯಾರ್ಥಿಗಳು ಮತ್ತು ಬೋಧಕ ಸಿಬ್ಬಂದಿಗೆ ಜ್ಞಾನ ಹಂಚಿಕೆ, ತಾಂತ್ರಿಕ ಸಂವಾದ, ಕೈಗಾರಿಕಾ ಅನುಭವ, ತರಬೇತಿ, ಸಂಶೋಧನೆ ಹಾಗೂ ವಿವಿಧ ಶೈಕ್ಷಣಿಕ ಮತ್ತು ವೃತ್ತಿಪರ ಚಟುವಟಿಕೆಗಳಲ್ಲಿ ಭಾಗವಹಿಸಲು ಹೆಚ್ಚಿನ ಅವಕಾಶಗಳು ದೊರೆಯಲಿವೆ.

CMTI ಮತ್ತು SSIT ನಡುವಿನ ನಿರಂತರ ಸಂವಹನಕ್ಕೆ ಈ ಒಪ್ಪಂದವು ಉತ್ತಮ ವೇದಿಕೆಯನ್ನು ಕಲ್ಪಿಸಲಿದ್ದು, ವಿದ್ಯಾರ್ಥಿಗಳಿಗೆ ಇತ್ತೀಚಿನ ತಾಂತ್ರಿಕ ಬೆಳವಣಿಗೆಗಳ ಕುರಿತು ಪ್ರಾಯೋಗಿಕ ಜ್ಞಾನ ಮತ್ತು ಕೈಗಾರಿಕಾ ಅನುಭವ ಪಡೆಯಲು ಸಹಕಾರಿಯಾಗಲಿದೆ. ಜೊತೆಗೆ, ಬೋಧಕ ಸಿಬ್ಬಂದಿಯ ತಾಂತ್ರಿಕ ಜ್ಞಾನ ಮತ್ತು ಸಂಶೋಧನಾ ಸಾಮರ್ಥ್ಯವನ್ನು ವೃದ್ಧಿಸಲು ಸಹ ಇದು ನೆರವಾಗಲಿದೆ.

ಈ ಸಂದರ್ಭದಲ್ಲಿ SSITಯ ಪ್ರಾಂಶುಪಾಲರಾದ ಡಾ. ಮಹಾಂತೇಶ್ ಎಂ. ನಾಡಕಟ್ಟಿ, ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಸಹನಾ, ಇಂಡಸ್ಟ್ರಿ ಇನ್‌ಸ್ಟಿಟ್ಯೂಟ್ ಇಂಟರ್ಯಾಕ್ಷನ್ ಸೆಲ್ (IIIC) ಸಂಯೋಜಕರಾದ ಡಾ. ಬಿ. ಎಸ್. ಯೋಗಾನಂದ, ಸಂಯೋಜಕರಾದ ಡಾ. ಪ್ರದೀಪ್ ಹಾಗೂ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಎಲ್ಲಾ ಬೋಧಕ ಸಿಬ್ಬಂದಿ ಉಪಸ್ಥಿತರಿದ್ದರು.

ಈ MoU ಮೂಲಕ ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿ, ಬೋಧಕ ಸಿಬ್ಬಂದಿಯ ಅಭಿವೃದ್ಧಿ, ನಾವೀನ್ಯತೆ, ಸಂಶೋಧನೆ, ಇಂಟರ್ನ್‌ಶಿಪ್, ಕೈಗಾರಿಕಾ ಯೋಜನೆಗಳು ಹಾಗೂ ಜ್ಞಾನ ವಿನಿಮಯಕ್ಕೆ ಹೆಚ್ಚಿನ ಅವಕಾಶಗಳು ಸೃಷ್ಟಿಯಾಗಲಿದ್ದು, ಕೈಗಾರಿಕೆ ಮತ್ತು ಶಿಕ್ಷಣ ಸಂಸ್ಥೆಗಳ ನಡುವಿನ ಸಹಯೋಗವನ್ನು ಮತ್ತಷ್ಟು ಬಲಪಡಿಸುವಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.