ಮಂಗಳೂರು :-ಪ್ರತಿಷ್ಠಿತ ಪಿಲಿ ನಲಿಕೆ ಸೀಸನ್ 11 ಸಂಸ್ಥಾಪಕರಾದ ಮಿಥುನ್ ಎಂ ರೈ ಇವರ ನೇತೃತ್ವದಲ್ಲಿ ನಡೆಯುವ ಫೀಲಿ ನಲಿಕೆ ಮೇಘ ಕಾರ್ಯಕ್ರಮವನ್ನು ನಡೆಸಿಕೊಂಡು ಬರುವ ನಮ್ಮ ನಿಮ್ಮೆಲ್ಲರ ನೆಚ್ಚಿನ ಮಿಥುನ್ ಎಂ ರೈ ಅವರ ನೇತೃತ್ವದಲ್ಲಿ ಈ ಸಲದ ಪಿಲಿ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಗಣ್ಯರು ಚಿತ್ರನಟರು ಕ್ರಿಕೆಟಿಗರು ಆಗಮಿಸಲಿದ್ದಾರೆ ಕರಾವಳಿಯ ಹೆಮ್ಮೆಯ ಹುಲಿವೇಷ ಪರಂಪರೆ ತುಳು ನಾಡಿನ ಸಾಂಸ್ಕೃತಿಕ ವೈಭವ ಹಾಗೂ ಜನಪದ ಕಲೆಯ ಸಂಭ್ರಮವನ್ನು ತುಳು ನಾಡಿನ ಸೊಗಡು ಸಂಭ್ರಮವನ್ನು ವಿಶ್ವದ ಗಮನಕ್ಕೆ ತರುವ ಪಿಲಿ ನಲಿಕೆ ಸೀಸನ್ 11ರ ವೇದಿಕೆಗೆ ಕ್ರಿಕೆಟ್ ತಾರೆ ದಿನೇಶ್ ಕಾರ್ತಿಕ್, ಒಲಂಪಿಕ್ ಪದಕ ವಿಜೇತ ಬಾಕ್ಸರ್ ವಿಜೇಂದರ್ ಸಿಂಗ್, ಖ್ಯಾತ ನಟ ಉನ್ನಿ ಮುಕುಂದನ್, ನಟ ಆಗು ನಿರ್ದೇಶಕ ರಿಷಬ್ ಶೆಟ್ಟಿ, ಹಾಗೂ ನಿರ್ದೇಶಕ ಶ್ರೀ ರಾಜ್ ಬಿ ಶೆಟ್ಟಿ, ಮತ್ತು ಬಾಲಿವುಡ್ ನಟ ಹೆಮ್ಮೆಯ ಕರಾವಳಿಯ ಪುತ್ರ ಸುನಿಲ್ ಶೆಟ್ಟಿ ಅವರು ಆಗಮಿಸಲಿದ್ದಾರೆ ,
ಅದು ಅಲ್ಲದೆ(wwE) ದಿ ಗ್ರೇಟ್ ಕಲಿ, ಆಗಮಿಸಲಿದ್ದಾರೆ ಇದೆಲ್ಲವೂ ಕರಾವಳಿ ಉತ್ಸವ ಮೈದಾನ ಮಂಗಳ ಕ್ರೀಡಾಂಗಣದಲ್ಲಿ ನಡೆಯಲಿದೆ ಈ ಸ್ಪರ್ಧೆಯಲ್ಲಿ ಒಂಬತ್ತು ಹುಲಿವೇಷ ತಂಡಗಳು ಭಾಗವಹಿಸಲಿವೆ ಪ್ರಥಮ ಬಹುಮಾನವಾಗಿ 10 ಲಕ್ಷ, ದ್ವಿತೀಯ ಬಹುಮಾನ 5 ಲಕ್ಷ, ತೃತೀಯ ಬಹುಮಾನ ಮೂರು ಲಕ್ಷ, ಹಾಗೂ ಎಲ್ಲರಿಗೂ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಗುವುದು.
ಅದು ಈ ಕಾರ್ಯಕ್ರಮದಲ್ಲಿ ವೈಯುಕ್ತಿಕ ವಿಭಾಗದ ವಿಜೇತರಿಗೆ 50,000 ಬಹುಮಾನ ನೀಡಲಾಗುವುದು ಹಾಗೂ ಬಾಲಿವುಡ್, ಸ್ಯಾಂಡಲ್ ವುಡ್, ಕೋಸ್ಟಲ್ ವುಡ್ ತಾರೆಯರು ಕ್ರಿಕೆಟ್ ದಿಗ್ಗಜರ ಮೆರುಗು ಸಂಭ್ರಮಿಸಲಿದೆ.
ಈ ಕಾರ್ಯಕ್ರಮವು ಅಕ್ಟೋಬರ್ 20 ನೇ ತಾರೀಕು ಕರಾವಳಿ ಉತ್ಸವ ಮೈದಾನ ಮಂಗಳೂರು ಇಲ್ಲಿ ಅದ್ದೂರಿಯಾಗಿ ಜರಗಲಿದೆ ಖ್ಯಾತ ನಾಮರ ಉಪಸ್ಥಿತಿ ಯಲ್ಲಿ ಹುಲಿ ವೇಷದ ಅಬ್ಬರ ತುಳು ನಾಡಿನ ಸಂಸ್ಕೃತಿ ತುಳು ನಾಡಿನ ಜನರ ಉತ್ಸಾಹ ದೊಂದಿಗೆ ಈ ಬಾರಿಯ ಪೀಲಿ ನಲಿಕೆ ಬಹಳ ಅದ್ದೂರಿಯಾಗಿ ಮೂಡಿ ಬರಲಿದೆ ನಮ್ಮ ಮಣ್ಣಿನ ಕಲೆ ಮತ್ತು ಸಂಸ್ಕೃತಿಯ ತುಳುನಾಡಿನ ಸೊಗಡನ್ನು ಒಗ್ಗಟ್ಟಿನಿಂದ ಸಂಭ್ರಮಿಸೋಣ.
ಬಡವರ ಬಂಧು ಉದಾರ ದಾನಿ ಪಿಲಿ ನಲಿಕೆ ಅಧ್ಯಕ್ಷರಾದ ಮಿಥುನ್ ಎಂ ರೈ ಇಂಥ ಒಳ್ಳೆ ಕಾರ್ಯಕ್ರಮವನ್ನು ನಡೆಸುವುದರ ಮೂಲಕ ತುಳುನಾಡಿನ ಎಲ್ಲಾ ಜನರ ಹೃದಯ ಪೂರ್ವಕ ಅಭಿನಂದನೆಗಳು ನೀವು ಬನ್ನಿ ನಿಮ್ಮವರನ್ನು ಕರೆ ತನ್ನಿ ನಿಮಗೆಲ್ಲರಿಗೂ ಆದರದ ಸ್ವಾಗತ,,
ರಾಮಚಂದ್ರ ಕಿಲೆಂಜೂರು,
