Ticker

6/recent/ticker-posts

*ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಹಾರ-ತುರಾಯಿ ಬೇಡ, ಪಟಾಕಿ ಸಿಡಿಸಬೇಡಿ,ಕ್ಷೇತ್ರದ ಸಾರ್ವಜನಿಕರಿಗೆ ಹಾಗೂ ಅಭಿಮಾನಿಗಳಿಗೆ ಶಾಸಕಕೆ.ಎಂ. ಉದಯ್ ಮನವಿ*

 
*ಕೆ.ಎಂ ದೊಡ್ಡಿ :-ಸಾರ್ವಜನಿಕ ಸಮಾರಂಭಗಳು  ಹಾಗೂ ಪಕ್ಷದ ಕಾರ್ಯಕ್ರಮಗಳಲ್ಲಿ ಅದ್ದೂರಿ ಆಚರಣೆಗೆ  ಕಡಿವಾಣ ಹಾಕುವ ನಿಟ್ಟಿನಲ್ಲಿ ಮದ್ದೂರು ಕ್ಷೇತ್ರದ ಶಾಸಕ ಕೆ.ಎಂ. ಉದಯ್ ವಿನೂತನ ಹಾಗೂ ಮಾದರಿ ಯೋಚನೆಯೊಂದನ್ನು ಮುಂದಿಟ್ಟಿದ್ದಾರೆ,ತಮ್ಮನ್ನು ಭೇಟಿ ಮಾಡಲು ಬರುವ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಹಾರ, ತುರಾಯಿ ತರಬಾರದು  ಹಾಗೂ ಪಟಾಕಿಗಳನ್ನು ಸಿಡಿಸಬಾರದೆಂದು  ಎಂದು ಕ್ಷೇತ್ರದ ಜನತೆಗೆ ಕಳಕಳಿಯ ಮನವಿ ಮಾಡಿದ್ದಾರೆ.  

ಸರಳತೆ ಹಾಗೂ ಪರಿಸರ ಕಾಳಜಿಗೆ ಒತ್ತು  ನೀಡುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ  ದಿನಗಳಲ್ಲಿ ರಾಜಕೀಯ ನಾಯಕರ ಸ್ವಾಗತಕ್ಕೆಂದು ಹಾರ-ತುರಾಯಿಗಳ ಮೇಲೆ ಹಾಗೂ ಪಟಾಕಿ ಸಿಡಿಸುವುದ ಕಾರ್ಯಕ್ಕೆ ಬ್ರೇಕ್ ಹಾಕಿದ್ದಾರೆ.
 
ಕಾರ್ಯಕರ್ತರು ಹಾಗೂ ಅಭಿಮಾನಿಗಳು  ಸಾವಿರಾರು ರೂಪಾಯಿಗಳನ್ನು ಅನಗತ್ಯವಾಗಿ ಖರ್ಚು ಮಾಡಲಾಗುತ್ತದೆ,ಇದರಿಂದ ಹಣದ ಪೋಲಾಗುವುದಲ್ಲದೆ, ಪಟಾಕಿ ಶಬ್ದ ಹಾಗೂ ಹೊಗೆಯಿಂದ ವಾತಾವರಣ ಮಾಲಿನ್ಯಗೊಳ್ಳುತ್ತದೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಶಾಸಕರು ಈ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.

​ಅಭಿಮಾನಿಗಳಿಗೆ ಶಾಸಕರ ಸಂದೇಶ ಕಾರ್ಯಕರ್ತರು ಮತ್ತು ಅಭಿಮಾನಿಗಳು ನನ್ನ ಮೇಲಿರುವ ಅಭಿಮಾನವನ್ನು ಹಾರ, ತುರಾಯಿ ಮತ್ತು ಪಟಾಕಿಗಳ ಮೂಲಕ ತೋರಿಸುವುದು ಬೇಡ.ಇದರ ಬದಲಾಗಿ ಆಯಾ  ಗ್ರಾಮಗಳಲ್ಲಿ  ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಮಾಡುವ ಅಥವಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿಗಳನ್ನು ನೀಡುವ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಳ್ಳಿ ಎಂದು ಶಾಸಕ ಕೆ.ಎಂ. ಉದಯ್ ತಿಳಿಸಿದ್ದಾರೆ.  

​ಶಾಸಕರ ಈ ಸರಳತೆಯ  ನಿರ್ಧಾರಕ್ಕೆ ಕ್ಷೇತ್ರದ ಸಾರ್ವಜನಿಕ ವಲಯದಿಂದ   ಮೆಚ್ಚುಗೆ ವ್ಯಕ್ತವಾಗುತ್ತಿದ್ದು,ಪ್ರಜ್ಞಾವಂತಿಕೆಯ  ಮಾದರಿ ನಡೆ ಎಂದು ಪ್ರಶಂಸೆಗಳು ವ್ಯಕ್ತವಾಗುತ್ತಿವೆ.

 *ವರದಿ :- ಸಂತೋಷ್ ಟಿಬಿ*