ಪಾವಗಡ: ತಾಲೂಕಿನ ವೈ.ಎನ್. ಹೊಸಕೋಟೆ ಹೋಬಳಿಯ ಬಿ. ಹೊಸಹಳ್ಳಿ ಗ್ರಾಮಸ್ಥರ ಅನುಕೂಲಕ್ಕಾಗಿ ಆರಂಭಿಸಲಾದ ಎರಡು ನೂತನ ಸರ್ಕಾರಿ ಬಸ್ಗಳಿಗೆ ಶಾಸಕ ಹೆಚ್. ವಿ. ವೆಂಕಟೇಶ್ ಅವರು ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಗ್ರಾಮೀಣ ಭಾಗದ ಜನರಿಗೆ ಮತ್ತು ವಿದ್ಯಾರ್ಥಿಗಳಿಗೆ ಸಾರಿಗೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಈ ಬಸ್ಗಳನ್ನು ನಿಯೋಜಿಸಲಾಗಿದೆ.
ಬಸ್ ಸಂಚಾರದ ಮಾರ್ಗಗಳು:
ಮೊದಲ ಬಸ್: ಬಿ. ಹೊಸಹಳ್ಳಿ, ಮರಿದಾಸನಹಳ್ಳಿ, ಮಾರ್ಗವಾಗಿ ಬೆಂಗಳೂರಿಗೆ ಸಂಚರಿಸಲಿದೆ.
ಎರಡನೇ ಬಸ್: ಪಾವಗಡ, ಮರಿದಾಸನಹಳ್ಳಿ, ಬಿ. ಹೊಸಹಳ್ಳಿ, ವೈ.ಎನ್. ಹೊಸಕೋಟೆ ಗ್ರಾಮೀಣ ಭಾಗದಲ್ಲಿ ದಿನಕ್ಕೆ ಒಟ್ಟು 8 ಸಿಂಗಲ್ ಟ್ರಿಪ್ಗಳ ಓಡಾಟ ನಡೆಸಲಿದೆ.
ಈ ಸಂದರ್ಭದಲ್ಲಿ ಕೆಎಸ್ಆರ್ಟಿಸಿ ಡಿಪೋ ಮ್ಯಾನೇಜರ್ ಮನು, ಮುಖಂಡರಾದ ಚಿಂತಲರೆಡ್ಡಿ, ವಿರಮ್ಮನಹಳ್ಳಿ ಪರಮೇಶ್, ಮಂಜುನಾಥ್ ರೆಡ್ಡಿ, ರಂಗಪ್ಪ, ಪಿ.ಪಿ. ಈರಪ್ಪ, ಜಿ.ಟಿ. ರೆಡ್ಡಿ, ಭೀಮರೆಡ್ಡಿ, ಬಲ್ಲೆನಹಳ್ಳಿ ವೆಂಕಟೇಶ್, ರವಿಕುಮಾರ್, ಕೇಶವ ರೆಡ್ಡಿ ಸೇರಿದಂತೆ ಹಲವು ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
