Ticker

6/recent/ticker-posts

*ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ*

*ಕೆ.ಎಂ ದೊಡ್ಡಿ :-ಸಾಲಬಾದೆ ತಾಳಲಾರದೆ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಮದ್ದೂರು ತಾಲ್ಲೂಕಿನ ಕೆ.ಎಂ. ದೊಡ್ಡಿ ಪೊಲೀಸ್ ಠಾಣಾ ವ್ಯಾಪ್ತಿಯ ಸುಣ್ಣದದೊಡ್ಡಿ ಗ್ರಾಮದಲ್ಲಿ ನಡೆದಿದೆ.
ಸುಣ್ಣದದೊಡ್ಡಿ ಗ್ರಾಮದ ಶ್ರೀ ಲಕ್ಷ್ಮೇಗೌಡ ಅಲಿಯಾಸ್ ನಟರಾಜು (54 ವರ್ಷ) ಮೃತ ರೈತ 

 ಧರ್ಮಸ್ಥಳ ಸಂಘ, ಇತರೆ ಸಂಘಗಳು ಹಾಗೂ ಮೈಕ್ರೋ ಫೈನಾನ್ಸ್ ಸಾಲಗಳು ಸೇರಿದಂತೆ ವಿವಿಧ ಕಡೆಗಳಲ್ಲಿ ಸಾಲ ಮಾಡಿದ್ದ ಇವರು, ನಿರಂತರ ಬೆಳೆ ನಷ್ಟ ಹಾಗೂ ಆರ್ಥಿಕ ಮುಗ್ಗಟ್ಟಿನಿಂದ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದು  ಸಾಲಭಾದೆ ತಾಳಲಾರದೆ  ಮನನೊಂದು ಸೆಪ್ಟೆಂಬರ್ 28, 2026 ರಂದು ಸಂಜೆ ತಮ್ಮ ಜಮೀನಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

​ಈ ಘಟನೆಗೆ ಸಂಬಂಧಿಸಿದಂತೆ ಮೃತರ ಪತ್ನಿ ಶ್ರೀಮತಿ ಮಹಾದೇವಮ್ಮ ಅವರು ನೀಡಿರುವ ದೂರಿನ ಮೇರೆಗೆ ಕೆ.ಎಂ. ದೊಡ್ಡಿ ಪೊಲೀಸ್ ಠಾಣೆಯಲ್ಲಿ ಯು.ಡಿ.ಆ (UDR) ನಂ: 21/2026, ಕಲಂ: 194 ಬಿ.ಎನ್.ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

 ಅನ್ನದಾತನ ಕಣ್ಣೀರು ಒರೆಸಲು ಮತ್ತು ರೈತ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಹಾಗೂ ಗೌರವಯುತ ಪರಿಹಾರ ಒದಗಿಸುವಂತೆ ಸ್ಥಳೀಯರು ಮತ್ತು ರೈತ ಮುಖಂಡರು ಬಲವಾಗಿ ಆಗ್ರಹಿಸಿದ್ದಾರೆ.

 *ವರಧಿ :- ಸಂತೋಷ ಟಿಬಿ*