ಪಾವಗಡ: ಜಿಲ್ಲಾಮಟ್ಟದಲ್ಲಿ ನಡೆದ ಟೇಬಲ್ ಟೆನಿಸ್ (ಟಿಟಿ) ಪಂದ್ಯಾವಳಿಯಲ್ಲಿ ಪಾವಗಡ ತಾಲೂಕಿನ ಕೊಡಮಡಗು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.
ತಾಲೂಕಿನ ವೈ.ಎನ್ .ಹೊಸಕೋಟೆ ಗ್ರಾಮದ ವಾಸವಿ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರೌಢಶಾಲೆಯ ಕ್ರೀಡಾಕೂಟದಲ್ಲಿ ಕೊಡಮಡಗು ಸರ್ಕಾರಿ ಪ್ರೌಢಶಾಲೆಯ ಬಾಲಕಿಯರ ತಂಡ ಟೇಬಲ್ ಟೆನ್ನಿಸ್ ನಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ.
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು ಲಿಖಿತಾ, ಇಂದು , ನಾಗಶ್ರೀ, ಅವಂತಿಕಾ, ಅನುಷಾ, ಪ್ರಶಾಂತಿ ,ಚಂದನ, ಜಿಲ್ಲಾ ಬಾಲಕರ ಟೇಬಲ್ ಟೆನ್ನಿಸ್ ತಂಡದಿಂದ ಈ ಶಾಲೆಯ ವಿದ್ಯಾರ್ಥಿ ಸುಭಾಷ್ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದರು.
ಈ ಸಾಧನೆಗಾಗಿ ಎಸ್‌ಡಿಎಂಸಿ ಅಧ್ಯಕ್ಷರು,ಸದಸ್ಯರು, ಮುಖ್ಯಶಿಕ್ಷಕರು,ಶಿಕ್ಷಕರು, ಪೋಷಕರು, ಕೊಡಮಡಗು ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ವಿಮಲಾಅವರನ್ನು ಹಾಗೂ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
