Ticker

6/recent/ticker-posts

ದೇಶದ ಗಡಿಕಾಯುವ ಸೈನಿಕನಿಗೆ ಹಾಸನ ಜಿಲ್ಲೆಯ ಕ್ಷೀರಾಮೃತ”

.
 ಬೇಲೂರು :-  ಹಾಸನ ಹಾಲು ಒಕ್ಕೂಟದಿಂದ ಪ್ರತಿನಿತ್ಯ ಸರಾಸರಿ 16 ಲಕ್ಷ ಲೀಟರ್ ಹಾಲು ಉತ್ಪಾದಕರಿಂದ ಬರುತ್ತಿದೆ. ಇದರಲ್ಲಿ 4 ಲಕ್ಷ ಲೀಟರ್ ಹಾಲು ದೇಶವನ್ನು ಕಾಯುವ ಸೈನಿಕರಿಗೆ ಕಳಿಸುವುದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ ಎಂದು ಹಾಸನ ಸಹಕಾರಿ ಹಾಲು ಒಕ್ಕೂಟದ ಸಹಾಯಕ ವ್ಯವಸ್ಥಾಪಕ ಎಸ್.ಬಿ.ದಿನೇಶ್ ಹೇಳಿದರು.

 ತಾಲ್ಲೂಕಿನ ಹೆಬ್ಬಾಳು ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಹೈನುಗಾರಿಕೆ ಅತ್ಯಂತ ಪ್ರಬಲವಾಗಿ ಬೆಳೆಯಲು ಮಾಜಿ ಸಚಿವರಾದ ಹೆಚ್.ಡಿ.ರೇವಣ್ಣನವರ ಕಾರ್ಯಕ್ಷಮತೆ ನಿಜಕ್ಕೂ ಶ್ಲಾಘನೀಯ, ಸದ್ಯ ರಾಜ್ಯದಲ್ಲಿ ಬರ ಪರಿಸ್ಥಿತಿಯಿಂದ ರೈತರು ತತ್ತರಿಸಿದ್ದು ಅವರಿಗೆ ಬೆಂಬಲ ನೀಡುವ ಮೂಲಕ ಅರ್ಥಿಕ ಸಬಲೀಕರಣಕ್ಕೆ ಮುನ್ನುಡಿ ಬರಯಬೇಕು ಎಂದು ಹಾಸನ ಹಾಲು ಒಕ್ಕೂಟದ ಅಧ್ಯಕ್ಷರಾದ ಹೆಚ್.ಡಿ.ರೇವಣ್ಣನವರು ಹೈನುಗಾರಿಕೆ ಸಾಲವನ್ನು ರೈತರಿಗೆ ನೀಡಲು ಮುಂದಾಗಿದ್ದಾರೆ ಎಂದ ಅವರು ಹಾಸನ ಒಕ್ಕೂಟ, ಚಿಕ್ಕಮಗಳೂರು-ಕೊಡಗು ಮತ್ತು ಹಾಸನ ಜಿಲ್ಲೆಯನ್ನು ಹೊಂದಿದೆ. ಬೇಲೂರು ತಾಲ್ಲೂಕು ಕೂಡ ಹೈನುಗಾರಿಕೆಯ ಹಾಲಿನ ಉತ್ಪಾದನೆಯಲ್ಲಿ ಉತ್ತಮ ಹೆಸರು ಪಡೆದಿದೆ. 

ಇಲ್ಲಿನ 137 ಸಹಕಾರ ಸಂಘಗಳಲ್ಲಿ 37 ಸಂಘ ಬಿಎಂಸಿ ಹೊಂದಿದೆ. ರೈತರಿಗೆ ಇನ್ನುಷ್ಟು ಹಾಲಿನ ದರವನ್ನು ಹೆಚ್ಚಿಸಬೇಕು ಎಂದು 78 ಎಕ್ಕರೆಯಲ್ಲಿ ಸಾವಿರ ಕೋಟಿ ವೆಚ್ಚದಲ್ಲಿ ಮೋಘ ಡೈರಿ ಆರಂಭವಾಗುತ್ತಿದ್ದು ಇನ್ನು ಎರಡು ತಿಂಗಳಲ್ಲಿ ಲೋಕಾರ್ಪಣೆಯಾಗಲಿದೆ ಎಂದರು.

 ಹೆಬ್ಬಾಳು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ವೇದಮೂರ್ತಿ ಮಾತನಾಡಿ,   ಬರಪರಿಸ್ಥಿತಿಯಲ್ಲಿ ರೈತರಿಗೆ ಹೈನುಗಾರಿಕೆ ಕೈಹಿಡಿದಿದೆ. ನಾವುಗಳು ನೀಡುವ ಹಾಲು ಸೈನಿಕರಿಗೆ, ಶಾಲಾ ಮಕ್ಕಳಿಗೆ ಮತ್ತು ಗ್ರಾಹಕರಿಗೆ ನೀಡುವ ಕಾರಣದಿಂದ ಪ್ರತಿ ರೈತರು ಗುಣಮಟ್ಟದ ಹಾಲನ್ನು ನೀಡಬೇಕು ಎಂದು ಮನವಿ ಮಾಡಿದ ಅವರು ಸರ್ವ ಸದಸ್ಯರ ವಾರ್ಷಿಕ ಸಭೆಯನ್ನು ಸದಸ್ಯರ ಅಭಿಪ್ರಾಯದಂತೆ ಸಂಘದ ಚಟುವಟಿಕೆಗಳನ್ನು ನಡೆಸಲಾಗುತ್ತದೆ.

 ಈಗಾಗಲೇ ಸೂಕ್ತ ಕಟ್ಟಡ ಮತ್ತು ಸಭಾಂಗಣ ಇರುವ ನಿಟ್ಟನಲ್ಲಿ ಮುಂದಿನ ದಿನದಲ್ಲಿ ಸಭಾಂಗಣಕ್ಕೆ ಹೈಟಕ್ ಸ್ವರೂಪ ನೀಡಲು ಬದ್ಧ, ಹಾಸನ ಒಕ್ಕೂಟದಿಂದ ಪಶು ವೈದ್ಯರನ್ನು ಕರೆಸುವ ಕೆಲಸ ಮಾಡಲಾಗುತ್ತದೆ ಎಂದು ತಿಳಿಸಿದರು.

ಹೆಬ್ಬಾಳು ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ನಿರ್ದೇಶಕ ಹೆಬ್ಬಾಳು ಹಾಲಪ್ಪ ಮಾತನಾಡಿ, ಸಹಕಾರ ಸಂಘದಲ್ಲಿ ಷೇರುದಾರರು ಪ್ರಮುಖ ಪಾತ್ರ ವಹಿಸುವ ಹಿನ್ನಲೆಯಲ್ಲಿ ಹಾಲು ಹಾಕದೆ ಷೇರು ಹೊಂದಿರುವವರಿಗೆ ಒಂದು ನಿರ್ದೇಶಕ ಸ್ಥಾನವನ್ನು ಮೀಡಲಿಡಬೇಕು ಮತ್ತು ಹೆಬ್ಬಾಳಿನಲ್ಲಿ ಪಶು ಚಿಕಿತ್ಸಾಲಯ ಕಟ್ಟಡ ನಿರ್ಮಾಣಕ್ಕೆ ಸದ್ಯ ಶಾಸಕರಾದ ಹೆಚ್.ಕೆ.ಸುರೇಶ್ ಅವರು ಅನುದಾನ ನೀಡುವ ಭರವಸೆ ನೀಡಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಹಾಲಿನಡೈರಿಗೆ ಅತಿ ಹೆಚ್ಚು ಹಾಲನ್ನು ಹಾಕಿದ ಪರಮೇಶ್, ಚಂದ್ರಶೇಖರಯ್ಯ ಮತ್ತು ಜಗದೀಶ್ ಅವರನ್ನು ಸನ್ಮಾನಿಸಲಾಯಿತು ಮತ್ತು ಎಸ್‌ಎಸ್‌ಎಲ್‌ಸಿ ಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದನೆ ಸಲ್ಲಿಸಲಾಯಿತು.

 ಉಳಿದಂತೆ ಉಪಾಧ್ಯಕ್ಷೆ ಮಂಜುಳಾ, ನಿರ್ದೇಶಕರಾದ ಕುಮಾರ್, ಉಮೇಶ್, ರುದ್ರೇಶ್, ಸೋಮಶೇಖರ್, ರವಿ, ಕಾಂತರಾಜು, ದೇವರಾಜ್, ಅಶ್ವಿನಿ, ಸಾವಿತ್ರಿ, ಕಾರ್ಯದರ್ಶಿ ಶಂಕರೇಗೌಡ, ಮಾಜಿ ನಿರ್ದೇಶಕ ಜಗದೀಶ್, ಸಿಬ್ಬಂದಿಗಳಾದ ವಸಂತಕುಮಾರ್ ಮತ್ತು ಹರೀಶ್ ಹಾಜರಿದ್ದರು.