ಪಾವಗಡ: ತಾಲೂಕಿನ ಕೆ.ಟಿ.ಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 50ನೇ ವರ್ಷದ ಸುವರ್ಣ ಮಹೋತ್ಸವ ಹಾಗೂ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಸಹಕಾರ ಸಂಘದ ಕಚೇರಿ ಆವರಣದಲ್ಲಿ ನೆರವೇರಿತು
ಕಾರ್ಯಕ್ರಮವನ್ನು ಮಾಜಿ ಶಾಸಕ ಕೆ.ಎಂ. ತಿಮ್ಮರಾಯಪ್ಪ ಉದ್ಘಾಟಿಸಿ ಮಾತನಾಡಿ ಸಹಕಾರ ಸಂಘ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುವುದರ ಜೊತೆಗೆ ಉತ್ತಮ ಲಾಭಗಳಿಸುವ ಮೂಲಕ ಅಭಿವೃದ್ಧಿಪಡಿಸುತ್ತಿರುವ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಸಿಬ್ಬಂದಿಗಳು ಮುಂದಿನ ದಿನಗಳಲ್ಲಿ ಎಲ್ಲಾ ರೈತರ ಸಾರ್ವಜನಿಕರ ಹೆಚ್ಚಿನ ವಿಶ್ವಾಸ ಗಳಿಸಿ ಇನ್ನೂ ಉನ್ನತ ಮಟ್ಟಕ್ಕೆ ಈ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನು ಬೆಳಸಬೇಕು ಹಾಗೆಯೇ ಈ ಬಾರಿ ಸುಮಾರು 10 ಲಕ್ಷ 63 ಸಾವಿರ ಲಾಭಗಳಿಸಿರೋದು ಉತ್ತಮ ಬೆಳವಣಿಗೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥಾಪಕ ಅಧ್ಯಕ್ಷರಾದ ಡಿ. ರಂಗೇಗೌಡ ರವರು ಮಾತನಾಡಿ ಸಹಕಾರ ಸಂಘ ಉಳಿಯಬೇಕಾದರೆ ಪ್ರತಿಯೊಬ್ಬರು ಕೈಜೋಡಿಸಬೇಕು ಸಕಾಲದಲ್ಲಿ ಸಾಲ ಮರುಪಾವತಿ ಮಾಡಬೇಕು ಸಂಸ್ಥಾಪಕ ಅಧ್ಯಕ್ಷನಾಗಿ ಇಂದು 50ನೇ ವರ್ಷದ ಸುವರ್ಣ ಮಹೋತ್ಸವದಲ್ಲಿ ಸನ್ಮಾನ ಸ್ಪೀಕರಿ ಸುತ್ತಿರುವುದು ಹೆಮ್ಮೆ ಅನಿಸಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಗೆ ಅಧ್ಯಕ್ಷರುಗಳಾಗಿ ಸೇವೆ ಸಲ್ಲಿಸಿದ ಮಾಜಿ ಅಧ್ಯಕ್ಷರುಗಳಾದ. ಡಿ ರಂಗೇಗೌಡ. ಎಲ್.ಲಿಂಗಣ್ಣ. ಎನ್.ನರಸಿಂಹಣ್ಣ.ಕೆ.ಹೆಚ್. ಹನುಮಂತರಾಯಪ್ಪ.ಎಮ್ ನಾಗರಾಜ್. ಎಂ.ಟಿ. ಗೋವಿಂದಪ್ಪ. ಮುತ್ತರಾಯಪ್ಪ.ನಿಜಲಿಂಗಪ್ಪ. ಇವರುಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಕೆ .ಎಲ್. ನಾಗರಾಜರವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ವರದಿಯನ್ನು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ನಾಗರಾಜು ಮಂಡಿಸಿದರು
ಕಾರ್ಯಕ್ರಮದಲ್ಲಿ ಹಿರಿಯ ಮುಖಂಡರಾದ. ಬಿ ಈರಣ್ಣ. ಡಿ ದಾಸಣ್ಣ. ಸಂಸ್ಥೆಯ ಉಪಾಧ್ಯಕ್ಷರಾದ ಭೀಮಯ್ಯ. ನಿರ್ದೇಶಕರುಗಳಾದ ಡಿ.ಬಿ. ಲೋಕೇಶ್ ಪಾಳೇಗಾರ್. ಕೆ.ಆರ್.ರಂಗಸ್ವಾಮಿ ಅಂಜಪ್ಪ. ಮಧುಷ. ಮುದ್ದಯ್ಯ. ನಾಗರಾಜು. ಶಿವಣ್ಣ .ಎಲ್ ಲೋಕೇಶ್ ವರಲಕ್ಷ್ಮಿ .ನಾಗವೇಣಿ ಸಂಸ್ಥೆಯ ಸಿಬ್ಬಂದಿ ವರ್ಗದವರು ಸಂಘದ ಸದಸ್ಯರುಗಳು ಹಾಜರಿದ್ದರು.
