Ticker

6/recent/ticker-posts

ಕೆ *.ಎಂ. ದೊಡ್ಡಿ ಪೊಲೀಸರ ಹೊಸ ಪ್ರಯೋಗ ವಾಹನಗಳ ಸುಗಮ ಪತ್ತೆಗೆ ಬಣ್ಣದ ಕೋಡ್ ವ್ಯವಸ್ಥೆ ಜಾರಿ*


ಕೆ.ಎಂ. ದೊಡ್ಡಿ:-ಸ್ಥಳೀಯ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸಂಚರಿಸುವ ವಾಹನಗಳ ನಿಖರ ಮಾಹಿತಿ ಸಂಗ್ರಹ ಮತ್ತು ಅಪರಾಧ ತಡೆಗಟ್ಟುವ ನಿಟ್ಟಿನಲ್ಲಿ, ಕೆ.ಎಂ. ದೊಡ್ಡಿ ಪೊಲೀಸರು ‘ಏಕೀಕೃತ ವಾಹನ ಮಾಹಿತಿ ವ್ಯವಸ್ಥೆ’ಯನ್ನು ಜಾರಿಗೆ ತಂದಿದ್ದಾರೆ. ಈ ಯೋಜನೆಯಡಿ ಠಾಣೆಯ ವತಿಯಿಂದ ವ್ಯಾಪ್ತಿಯಲ್ಲಿರುವ ಎಲ್ಲಾ ವಾಹನಗಳ ದಾಖಲೆಗಳನ್ನು ಪರಿಶೀಲಿಸಿ, ಅವುಗಳಿಗೆ ನಿರ್ದಿಷ್ಟವಾದ ‘ಕೆ.ಎಮ್.ಡಿ’ (KMD) ಸಂಖ್ಯೆಗಳನ್ನು ನೀಡಲಾಗಿದೆ.
​ಮೂರು ಬಣ್ಣಗಳಲ್ಲಿ ವಾಹನಗಳ ವರ್ಗೀಕರಣ ಮಾಡಿ ವಾಹನಗಳನ್ನು ಸುಲಭವಾಗಿ ಗುರುತಿಸಲು ಮತ್ತು ಸಂಚಾರ ನಿಯಂತ್ರಣವನ್ನು ಚುರುಕುಗೊಳಿಸಲು, ಪೊಲೀಸರು ಮೂರು ಬಣ್ಣಗಳ ಸಂಕೇತಗಳನ್ನು (Color Coding) ಅಳವಡಿಸಿದ್ದಾರೆ. 

ಕೆ.ಎಂ ದೊಡ್ಡಿ ಪೊಲೀಸ್  ಠಾಣೆ  ಅವರಣದಲ್ಲಿ ಠಾಣೆಯ ಸಬ್ ಇನ್ಸ್ಪೆಕ್ಟರ್ ದೀಕ್ಷಿತ್ ರವರ ನೇತೃತ್ವದಲ್ಲಿ ಕೆ.ಎಂ ದೊಡ್ಡಿಯಲ್ಲಿರುವ ತ್ರಿಚಕ್ರ ಆಟೋಗಳಿಗೆ ಕೆ.ಎಂ.ಡಿ ಸಂಖ್ಯೆಗಳ ಸ್ಟ್ರಿಕರ್ ಗಳನ್ನು ಅಂಟಿಸಲಾಯಿತು.
 ಕೆ.ಎಂ ದೊಡ್ಡಿಯಲ್ಲಿ ಸಂಚರಿಸುವ ವಾಹನಗಳ ಮಾದರಿ ಮತ್ತು ಬಳಕೆಯ ಆಧಾರದ ಮೇಲೆ ಈ ಬಣ್ಣಗಳನ್ನು ನಿಗದಿಪಡಿಸಲಾಗಿದೆ.

ಈ ಹೊಸ ವ್ಯವಸ್ಥೆಯಿಂದಾಗಿ ಯಾವುದೇ ವಾಹನವು ಶಂಕಿತ ಚಟುವಟಿಕೆಗಳಲ್ಲಿ ತೊಡಗಿದ್ದಲ್ಲಿ ಅಥವಾ ಸಂಚಾರ ನಿಯಮ ಉಲ್ಲಂಘಿಸಿದರೆ, ಆ ಬಣ್ಣದ ಕೋಡ್ ಮತ್ತು ಕೆ.ಎಮ್.ಡಿ ಸಂಖ್ಯೆಯ ಮೂಲಕ ತಕ್ಷಣವೇ ವಾಹನದ ಮಾಲೀಕರು ಮತ್ತು ಅದರ ಇತಿಹಾಸವನ್ನು ಪತ್ತೆಹಚ್ಚುವುದು ಸುಲಭವಾಗಲಿದೆ. ಅಲ್ಲದೆ, ಪೊಲೀಸ್ ಠಾಣೆಯ ದಾಖಲೆಗಳಲ್ಲಿ ವಾಹನಗಳ ನೈಜ ಮಾಹಿತಿಯನ್ನು ಡಿಜಿಟಲೀಕರಣಗೊಳಿಸಲು ಇದು ಸಹಕಾರಿಯಾಗಿದೆ.
ಠಾಣಾಧಿಕಾರಿಗಳ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ಕೆ ಸಾರ್ವಜನಿಕರು ಮತ್ತು ವಾಹನ ಸವಾರರಿಂದ ಉತ್ತಮ ಪ್ರತಿಕ್ರಿಯೆ ಮತ್ತು ಪ್ರಶಂಸೆಗಳನ್ನು  ವ್ಯಕ್ತಪಡಿಸಿದ್ದು , ಈ ವಿನೂತನ  ಮಾದರಿಯೂ  ಭದ್ರತಾ ಹಾಗೂ ಸುಗಮ ಸಂಚಾರ  ದೃಷ್ಟಿಯಿಂದ ಅತ್ಯಂತ ಪರಿಣಾಮಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

 *ವರದಿ :- ಸಂತೋಷ್ ಟಿಬಿ*