Ticker

6/recent/ticker-posts

ರೈತರ ಆರ್ಥಿಕ ಅಭಿವೃದ್ಧಿಗೆ ರೈತ ಉತ್ಪಾದಕ ಕಂಪನಿ ಚೈತನ್ಯದ ಬೆಳಕು: ಸುಕೇತ್ ರಾಜ್

      
ಮಲ್ಕುಂಡಿ:- ಗ್ರಾಮೀಣ ಭಾಗದಲ್ಲಿ ರೈತರ ಸಹಬಾಳ್ವೆಕೆಗೆ ರೈತ ಉತ್ಪಾದಕರ ಕಂಪನಿ ಸಹಕಾರಿಯಾಗಿದೆ ಎಂದು ಶ್ರೀ ಗುರುಮಲ್ಲೇಶ್ವರ ರೈತ ಉತ್ಪಾದಕರ ಕಂಪನಿಯ ಅದ್ಯಕ್ಷ ಸುಕೇತರಾಜ್ ಹೇಳಿದರು.   

ನಂಜನಗೂಡು ತಾಲ್ಲೂಕಿನ ಹೊಸಪುರ ಗ್ರಾಮದ ಶ್ರೀಗುರುಮಲ್ಲೇಶ್ವರ ರೈತ ಉತ್ಪಾದಕರ ಕಂಪನಿಯ 2024-25 ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

 ರೈತರು ಅರ್ಥಿಕವಾಗಿ ಅಭಿವೃದ್ಧಿ ಹೊಂದಲು ಹೆಚ್ಚಿನ ಷೇರು ಹೊಂದಬೇಕು 635 ಷೇರುದಾರರು ಹೊಂದಿರು ಈ ಕಂಪನಿ ಉತ್ತಮವಾಗಿ ಬೆಳೆಯಲು ಎಲ್ಲರ ಸಹಕಾರ ಮುಖ್ಯವಾಗಿದೆ. ಸಮಾಜದ ಎಲ್ಲ ಜನರಿಗೆ  ಈ ಕಂಪನಿಯು ಸಹಕಾರಿಯಾಗಿದೆ .

ಪತ್ತಿನ  ಸೌಹರ್ಧ  ಕಂಪನಿಗಳನ್ನು ಮಾಡಿ  ಬಡವರಿಗೆ ಕಡಿಮೆ ಬಡ್ಡಿಯನ್ನು ಸಾಲ ಸೌಲಭ್ಯಗಳನ್ನು ನೀಡುವುದ್ದರ ಮೂಲಕ ಗ್ರಾಮೀಣ ಭಾಗದ ರೈತರಿಗೆ ನೇರವಾಗಬೇಕು.ರೈತರಿಗೆ  ಗೊಬ್ಬರ ಬೀತ್ತನೆ ಬೀಜಗಳನ್ನು ಕಡಿಮೆ ದರದಲ್ಲಿ ನೀಡುವ ಮೂಲಕ ರೈತರಿಗೆ ನೇರವಾಗಬೇಕು ಕಂಪನಿಯಲ್ಲಿ ಯಾವುದೇ ಪ್ರತಿಫಲಪಕ್ಷೆ ಇಲ್ಲದೇ ಎಲ್ಲರೂ ದುಡಿದಾಗ ಮಾತ್ರ ಕಂಪನಿಗೆ ಉತ್ತಮ ಹೆಸರು ಬರಲು ಸಾಧ್ಯ ಎಂದು ತಿಳಿಸಿದರು.

ಈ ವೇಳೆ ಔಟ್ ರಿಚ್ ಸಂಸ್ಥೆಯ ಸಮನ್ವಯ ಅಧಿಕಾರಿ ವಿಲಿಯಂ ಡಿಸೌಜ,ತೋಟಗಾರಿಕೆ ಸಹಾಯಕ ಅಧಿಕಾರಿ ಚಂದ್ರು,ಸಂಘದ ಉಪವಾಸ ಪ್ರಭುಸ್ವಾಮಿ,ನಿರ್ದೇಶಕರುಗಳಾದ ಸಿದ್ದರಾಜು, ಶಿವನಂಜಪ್ಪ,ಉಲ್ಲಾಸ್,ಶಿವಮೂರ್ತಿ, ಲಿಂಗರಾಜಪ್ಪ,ಬಸವಣ್ಣ,ಲೀಲಾಮೂರ್ತಿ,ಪ್ರಕಾಶ್,ಸೋಮಣ್ಣ,ಸಿದ್ದೇಗೌಡ,ಪುಟ್ಟಮಾದಪ್ಪ,ಮೂರ್ತಿ,ಮಹೇಶ್, ಸಿಇಓ ರವಿಪ್ರಸಾದ್,ಸಹಾಯಕ ರವಿ ಸೇರಿದಂತೆ ಪ್ರಮುಖರು ಹಾಜರಿದ್ದರು