ಮಲ್ಕುಂಡಿ:- ರಸ್ತೆ ಮದ್ಯ ಅಪಾಯಕ್ಕಾಗಿ ಕಾಯುತ್ತಿದೆ ಗುಂಡಿ ವಾಹನ ಸಾವರಾರು ಎಚ್ಚರವಾಗಿ ಚಾಲನೆ ಮಾಡಬೇಕಾದ ಘಟನೆ ನಂಜನಗೂಡು ತಾಲ್ಲೂಕಿನ ಈರೇಗೌಡನಹುಂಡಿ ಗ್ರಾಮದಿಂದ ನಾಗಣಪುರ ಗ್ರಾಮಕ್ಕೆ ತೆರಳುವ ರಸ್ತೆ ಮದ್ಯ 2 ಗುಂಡಿಗಳು ಅಪಾಯಕ್ಕಾಗಿ ಕಾಯುತ್ತಿವೆ.
ಈ ರಸ್ತೆಯಲ್ಲಿ ಅತೀ ಹೆಚ್ಚು ಕುಡುಕರೇ ಓಡಾಡುತ್ತಿದ್ದು ಪ್ರಾಣಾಭಯದಲ್ಲಿ ಓಡಾಡುತ್ತಿದ್ದಾರೆ ಈ ರಸ್ತೆಯಲ್ಲಿ ಚಾಲನೆ ಮಾಡಬೇಕಾದರೆ ಹರಸಹಾಸ ಪಡುವಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಬಳ್ಳೂರಹುಂಡಿ ಗ್ರಾಮದ ಶಿವನಾಗಪ್ಪ ಮಾತನಾಡಿ ಈ ರಸ್ತೆಯಲ್ಲಿ ದಿನನಿತ್ಯ ಸಾವಿರಾರಿ ವಾಹನಗಳು ಚಾಲವಣೆ ಮಾಡುತ್ತಿದ್ದು ರಸ್ತೆಯಲ್ಲಿ ಗುಂಡಿಯಿಂದ ವಾಹನ ಚಾಲಕರು ವಾಹನ ಚಲಿಸಬೇಕಾದರೆ ತಮ್ಮ ಜೀವವನ್ನು ಕೈಯಲ್ಲಿ ಹಿಡಿದು ಓಡಿಸಬೇಕಾದ ಪರಿಸ್ಥಿತಿ ಉಂಟಾಗಿದೆ.
ಸರ್ಕಾರ ಗ್ಯಾರಂಟಿ ಯೋಜನೆಯ ಜೊತೆಗೆ ಗ್ರಾಮೀಣ ಭಾಗದಲ್ಲಿ ಅತೀ ಹೆಚ್ಚು ರಸ್ತೆಗಳು ಹದ್ದಗೆಟಿದ್ದು ಅದರ ಅಭಿವೃದ್ಧಿಗೆ ಒತ್ತು ನೀಡಬೇಕು. ಈರೇಗೌಡನಹುಂಡಿ ಗ್ರಾಮದಿಂದ ನಾಗಣಾಪುರ,ಕಾಲೋನಿಗಳಿಗೆ ತೆರಳವ ರಸ್ತೆಯಲ್ಲಿ ಗುಂಡಿಗಳಾಗಿದ್ದು ಬಸ್ ಸಂಚಾರ ಮಾಡಲು ತೊಂದರೆಯಾಗಿದೆ.
ದಿನನಿತ್ಯ ಶಾಲಾ ಮಕ್ಕಳು ತೆರಳಲು ತುಂಬಾ ತೊಂದರೆಯಾಗಿದೆ ಅಪಾಯ ಅಗುವುದಾಕ್ಕೂ ಮುಂಚೆ ಸಂಬಂಧ ಪಟ್ಟ ಅಧಿಕಾರಿಗಳು ಗಮನಹರಿಸಬೇಕು ಎಂದು ಬಳ್ಳೂರಹುಂಡಿ ಶಿವನಾಗಪ್ಪ ಒತ್ತಾಯಿಸಿದ್ದಾರೆ
