ಎಸ್ ಟಿ ಮೀಸಲಾತಿ ಹೆಚ್ಚಿಸಲು ಸಿದ್ದು ಬಂಡಿ ಒತ್ತಾಯ.
ಮುದಗಲ್ : ಕರ್ನಾಟಕ ರಾಜ್ಯದ ವಾಲ್ಮೀಕಿ ನಾಯಕ ಸಮುದಾಯದ ಜನಸಂಖ್ಯೆ ಆಧಾರದ ಮೇಲೆ ಶೇ 7. 5 ಮೀಸಲಾತಿ ಹೆಚ್ಚಳ ಮಾಡಬೇಕು ಎಂದು ಲಿಂಗಸುಗೂರು ತಾಲೂಕಿನ ಜೆಡಿಎಸ್ ಪಕ್ಷದ ಯುವಮುಖಂಡ ಸಿದ್ದು ವಾಯ್ ಬಂಡಿ ಒತ್ತಾಯ ಮಾಡಿದರು.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನಲ್ಲಿ ವಾಲ್ಮೀಕಿ ಜಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಇದೆ ಸಂದರ್ಭದಲ್ಲಿ ವಾಲ್ಮೀಕಿ ನಾಯಕ ಸಮಾಜದ ಗುರುಗಳಾದ ಪ್ರಸನ್ನಾನಂದ ಸ್ವಾಮೀಜಿ ವರದಾನೇಶ್ವರ ಸ್ವಾಮೀಜಿ ಮತ್ತು ಹುಲುಗಪ್ಪ ಗುರುಗುಂಟಾ. ಹನುಮೇಶ ನಾಯಕ ಛತ್ತರ. ಮೌನೇಶ ಆನೆಹೊಸೂರು. ದುರುಗಣ್ಣ ಕಾಚಾಪೂರು ಯಲ್ಲನಗೌಡ. ಆಂಜನೇಯ ಮಲ್ಲಾಪುರ ರಮೇಶ ಛತ್ತರ ಸೇರಿದಂತೆ ಸಮಾಜದ ಮುಖಂಡರು ಹಾಜರಿದ್ದರು.

