ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಬೇಡ : ಶಕುಂತಲಾ ಕನ್ನಾಪೂರಹಟ್ಟಿ...
ಚುನಾವಣೆ ಬಂದಾಗ ಮಾತ್ರ ರಾಜಕೀಯ ಮಾಡೋಣ ನಂತರ ಗ್ರಾಮಗಳ ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಬಿಟ್ಟು ಸಹಕಾರ ನೀಡಿದರೆ ಮಾತ್ರ ಅಭಿವೃದ್ಧಿ ಮಾಡಲು ಸಾಧ್ಯ ಎಂದು ನೂತನ ಗ್ರಾಮ ಪಂಚಾಯತ ಅಧ್ಯಕ್ಷೆ ಶಕುಂತಲಾ ಪರಮೇಶ ಕನ್ನಾಪೂರಹಟ್ಟಿ ಹೇಳಿದರು....
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್ ಪಟ್ಟಣ ಸಮೀಪದ ಉಪ್ಪಾರನಾಂದಿಹಾಳ ಗ್ರಾಮ ಪಂಚಾಯತ ಅಧ್ಯಕ್ಷೆ ಪದಗ್ರಹಣ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾಗಿ ಶಕುಂತಲಾ ಪರಮೇಶ ಕನ್ನಾಪೂರಹಟ್ಟಿ ಅಧಿಕಾರ ಸ್ವೀಕಾರ ಮಾಡಿ ಮಾತನಾಡಿದರು ...
ಇದೆ ಸಂದರ್ಭದಲ್ಲಿ ಪಂಚಾಯತ ಅಭಿವೃದ್ಧಿ ಅಧಿಕಾರಿ ತಿಮ್ಮಣ್ಣ ಗಬ್ಬುರು ಕಾಂಗ್ರೆಸ್ ಪಕ್ಷದ ಯುವಮುಖಂಡ ಪರಮೇಶ ಕನ್ನಾಪೂರಹಟ್ಟಿ ಮಲ್ಲಣ್ಣ ಸಾಹುಕಾರ ಬಸವರಾಜಗೌಡ ರಾಜಪ್ಪ ಭೂದೇರ ಶಿವಕುಮಾರ ಕಮ್ಮಾರ. ಶಿವನಗೌಡ ಲಕ್ಷ್ಮಣ್ಣ. ಹಂಪಮ್ಮ ಲಕ್ಷೀಬಾಯಿ ರೇಶ್ಮಾ ಸೇರಿದಂತೆ ಗ್ರಾಮ ಪಂಚಾಯತ ಸಿಬ್ಬಂದಿ ಕೂಡ ಇದ್ದರು .....
ಬಸವರಾಜ ಹೂನೂರು



