Ticker

6/recent/ticker-posts

ಮಕ್ಕಳ ಹಕ್ಕುಗಳ ಗ್ರಾಮ ಸಭೆ....

ಮಕ್ಕಳ ಹಕ್ಕುಗಳ ಗ್ರಾಮ ಸಭೆ....

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್ ಪಟ್ಟಣ ಸಮೀಪದ ಬಯ್ಯಾಪೂರು ಗ್ರಾಮದಲ್ಲಿ ಲಿಂಗಸುಗೂರು ಹೈದರಾಬಾದ್ ಕರ್ನಾಟಕ ವಿಮೋಚನಾ ವೇದಿಕೆ, ದೇವದುರ್ಗ ಡಾನ್ ರೋಸ್ಕೋ ಸಮಾಜ ಸೇವಾ ಸಂಸ್ಥೆ ಹಾಗೂ ಬಯ್ಯಾಪೂರು ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆ ಜರಗಿತು...

ಬಯ್ಯಾಪೂರು  ಗ್ರಾಮ ಪಂಚಾಯಿತಿ ವ್ಯಾಪ್ತಿಯ  ಬಯ್ಯಾಪೂರು ಭೋಗಾಪುರು ತಾಂಡಾ. ಭೋಗಾಪುರು ಬಂಡಿಸುಂಕಾಪುರು. ಬೊಮ್ಮನಾಳ ಸಜ್ಜಲಗುಡ್ಡ ಕೋಮನೂರು   ಗ್ರಾಮಗಳ ಶಾಲೆಯ ಮಕ್ಕಳು ಕುಡಿಯುವ ನೀರು. ಶಿಕ್ಷಕರ ಕೊರತೆ. ಆಟದ ಮೈದಾನ. ಶಾಲೆ ಕೊಠಡಿ ಅಂಗನವಾಡಿ ಸಮಸ್ಯೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಅಧಿಕಾರಿಗಳಿಗೆ ಮಾಹಿತಿ ನೀಡಿದರು.. 

ಮಕ್ಕಳ ಹಕ್ಕುಗಳ ಗ್ರಾಮ ಸಭೆಯನ್ನು  ವಿದ್ಯಾರ್ಥಿಗಳಾದ  ಪ್ರಿಯಾಂಕ ಮತ್ತು ಶಿವಕುಮಾರ  ದೀಪ ಬೆಳಗುವ ಮೂಲಕ  ಉದ್ಘಾಟಿಸಿದರು.

ಡಾನ್ ರೋಸ್ಕೋ ಸೇವಾ ಸಂಸ್ಥೆ ಸಂಯೋಜಕ ಮರಿಯಪ್ಪ ಪ್ರಾಸ್ಥಾವಿಕ ಮಾತನಾಡಿದರು 

ಹೈದರಾಬಾದ್ ಕರ್ನಾಟಕ ವಿಮೋಚನಾ ವೇದಿಕೆ ತಾಲ್ಲೂಕು ಸಂಯೋಜಕಿ ಅಮರಮ್ಮ ತೆರೆಬಾವಿ,  ಮುಖ್ಯಗುರುಗಳು ರಾಜಶೇಖರೆಡ್ಡಿ ನಾಗರಹಾಳ ವಲಯ ಶಿಕ್ಷಣಾಧಿಕಾರಿ ವಿಜಯಕುಮಾರ ಮೇಟಿ ಗಿರಿಮಲ್ಲಯ್ಯ ಮೋಟೇ  ಬಯ್ಯಾಪೂರು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಶಿವಬಸಪ್ಪ ತುಂಬದ ಸೇರಿದಂತೆ ಶಾಲೆ ಮಕ್ಕಳು   ಇದ್ದರು.


ಬಸವರಾಜ ಹೂನೂರು .