*ಕಾರಟಗಿ:* ಕೊಪ್ಪಳ ಜಿಲ್ಲೆ ಕಾರಟಗಿಯ ಪುರಸಭೆಯಲ್ಲಿ ಇಂದು ನೆಡೆದ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಕೈಯಲ್ಲಿ ಕಮಲ ಅರಳಿದೆ.
ಅಂದರೆ ಕಾಂಗ್ರೇಸ್ ನ ಏಳು ಜನ ಸದಸ್ಯರು ಬಿಜೆಪಿಯನ್ನು ಬೆಂಬಲಿಸಿದ್ದರಿಂದ ಕಾಂಗ್ರೇಸ್ ಪಕ್ಷದ ಸದಸ್ಯ ಶರಣೇಶ್ ಸಾಲೋಣಿ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿ ಬಿಜೆಪಿ ಗೆಲ್ಲಿಸಿದೆ. ತಮ್ಮ ಪಕ್ಷದ ಅಭ್ಯರ್ಥಿ ಅಧ್ಯಕ್ಷ ಆಗುತ್ತಿರುವದರಿಂದ ನಾನು ವಾಪಸ್ ಪಡೆದಿದ್ದೇನೆ ಎಂದು ಅಧ್ಯಕ್ಷ ಸ್ಥಾನದ ಕಾಂಗ್ರೇಸ್ ಅಭ್ಯರ್ಥಿ ರವರಾಜ್ ಪಾಟೀಲ್ ನಂದಿಹಳ್ಳಿ ಅವರು ತಮ್ಮ ನಾಮಪತ್ರವನ್ನು
ವಾಪಸ್ ಪಡೆದಿದ್ದರಿಂದ ಕಾಂಗ್ರೇಸ್ ಪಕ್ಷದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಶರಣೇಶ್ ಸಾಲೋಣಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಖ್ಯಾ ಬಲ ಇಲ್ಲದ್ದರಿಂದ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೇಸ್
ಯಾರನ್ನು ಸ್ಪರ್ಧೆಗೆ ಇಳಿಸಲಿಲ್ಲಾ. ಸಂಖ್ಯ ಬಲ ಇದ್ದರೂ ಸಹಿತ ಮೀಸಲಾತಿಗೆ ಬರುವ ಇಬ್ಬರೂ ಸದಸ್ಯರು ಬಿಜೆಪಿಯಲ್ಲಿ ಇದ್ದರೂ ಸಹಿತ, ಅವರು ಈಗಾಗಲೇ ಪುರ ಸಭೆಯ ಅಧ್ಯಕ್ಷರಾಗಿದ್ದರಿಂದ, ಉಪಾಧ್ಯಕ್ಷರಾಗಲು ನಿರಾಕರಿಸಿದ್ದಕ್ಕೆ ಉಪಾಧ್ಯಾಕ್ಷ ಸ್ಥಾನಕ್ಕೆ ಯಾರಕೂಡ ಸ್ಪರ್ಧಿಸದೇ ಖಾಲಿ ಉಳಿದಿದೆ.
ಬಿಜೆಪಿಯಿಂದ ಗೆದ್ದಂತಹ ಹತ್ತು ಜನ ಸದಸ್ಯರಿದ್ದರೀ ಸಹಿತ, ಕಾಂಗ್ರೇಸ್ ಪಕ್ಷದಿಂದ ಬಂದ ಸದಸ್ಯನನ್ನು ಬಿಜೆಪಿ ಶಾಸಕ ಅಧ್ಯಕ್ಷರಾನ್ನಾಗಿ ಮಾಡಿದ್ದು, ಹಾಗೂ ಇನ್ನು ಅನೇಕ ರಾಜಕೀಯ ದೊಂಬರಾಟಗಳನ್ನು ಮಾಡುವ ಮೂಲಕ ಶಾಸಕ ಬಸವರಾಜ ದಢೇಸುಗೂರು ಬಿಜೆಪಿ ಸದಸ್ಯರಿಗೆ ಹಾಗೂ ಕಾರ್ಯಕರ್ತರಿಗೆ ಅನ್ಯಾಯ ಮಾಡುತ್ಯಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಶಾಸಕರ ಮೇಲೆ ಒಳಗೊಳಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ವೇಳೆ 144 ಪ್ರಕಾರ ನಿಷೇಧ ಆಜ್ಞೆ ಜಾರಿಯಿದ್ದು, ಯಾವುದೇ ತರಹನಾಗಿ ಗುಂಪು ಸೇರುವುದು, ವಿಜೋಯೋತ್ಸವ ಆಚರಿಸಬಾರದು ಎಂಬ ನಿಯಮ ಇದ್ದರೂ ಸಹಿತ, ಶಾಸಕಸಕ ಬಸವರಾಜ ದಢೇಸುಗೂರು ಹಾಗೂ ಅವರ ಬೆಂಬಲಿಗರು ಗುಂಪು ಸೇರಿ, ಪಟಾಕ್ಷಿ ಬಿಟ್ಟು, ಮೆರವಣಿಗೆ ಮಾಡುವ ಮೂಲಕ ವಿಜಯೋತ್ಸವ ಆಚರಿಸಿದರು. ಈ ತರಹ ಕಾನೂನು ಮಾಡಿದವರೆ, ಕಾನೂನು ಮುರಿದರೆ ಹೇಗೆ ಎಂದು ಜನಗಳು ತೆಗಳಿದರು.
ಈ ಸಂದರ್ಭದಲ್ಲಿ ಸಂಸದ ಸಂಗಣ್ಣ ಕರಡಿ, ಶಾಸಕ ಬಸವರಾಜ ದಢೇಸುಗೂರು, ಚನ್ನಬಸವಪ್ಪ ಸುಂಕದ್, ಸೋಲೋಣಿ ವೀರೇಶ ಸೇರಿದಂತೆ ಹಲವರಿದ್ದರು.
*ವರದಿ: ಮಲ್ಲಿಕಾರ್ಜುನಗೌಡ ಹೊಸಮನಿ, ಕೊಪ್ಪಳ.*




