Ticker

6/recent/ticker-posts

ವಿಶಿಷ್ಟ್ಯ ಚೇತನರಿಗೆ ಮೊದಲ ಹಕ್ಕು ದೊರಕಿಸಿಕೊಡುವ ನಿಟ್ಟಿನಲ್ಲಿ ವಿಶೇಷ ಅಭಿಯಾನ ಅಗತ್ಯ: ಡಾ. ಸಿ ಎನ್‌ ಅಶ್ವಥ್‌ ನಾರಾಯಣ*


*
ರಾಜಾಜಿನಗರದಲ್ಲಿ ಪರಿಜ್ಞಾ ಕಾಂಪ್ರಹೆನ್ಸಿವ್‌ ಅಂಡ್‌ ಮಲ್ಟಿ ಡಿಸಿಪ್ಪೀನರಿ ಪಿಡಿಯಾಟ್ರಿಕ್‌ ಮತ್ತು ಪಿಡಿಯಾಟ್ರಿಕ್‌ ನ್ಯೂರೋ ರಿಹ್ಯಾಬಿಲಿಟೇಷನ್‌ ಸೆಂಟರ್‌ ಉದ್ಘಾಟನೆ
ಬೆಂಗಳೂರು ಏಪ್ರಿಲ್‌ 10: ದಿವ್ಯಾಂಗರು ಹಾಗೂ ವಿಶಿಷ್ಟ ಚೇತನರುಗಳಿಗೆ ಎಲ್ಲಾ ಕ್ಷೇತ್ರಗಳಲ್ಲೂ ಮೊದಲ ಹಕ್ಕು ಮತ್ತು ಪ್ರಾಶಸ್ತ್ಯ ದೊರಕಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಕೈಗೊಂಡಿರುವ ಕ್ರಮಗಳನ್ನು ಇನ್ನಷ್ಟು ಹೆಚ್ಚು ಮಾಡುವ ನಿಟ್ಟಿನಲ್ಲಿ ವಿಶೇಷ ಅಭಿಯಾನ ಕೈಗೊಳ್ಳಬೇಕಾದ ಅವಶ್ಯಕತೆಯಿದೆ ಎಂದು ಉನ್ನತ ಶಿಕ್ಷಣ ಸಚಿವರಾದ ಡಾ. ಅಶ್ವಥ್‌ನಾರಾಯಣ ಅವರು ಹೇಳಿದರು. 
ಇಂದು ಬೆಂಗಳೂರಿನ ರಾಜಾಜಿನಗರದಲ್ಲಿ ಮಕ್ಕಳ ನರರೋಗ ಚಿಕಿತ್ಸೆಯ ಸೂಪರ್‌ಸ್ಪೇಷಾಲಿಟಿ ಆಸ್ಪತ್ರೆ ಹಾಗೂ ಮಕ್ಕಳ ಬುದ್ದಿಮತ್ತೆ ಬೆಳವಣಿಗೆಯ ಪರಿಜ್ಞಾ ರಿಹ್ಯಾಬಿಲಿಟೇಷನ್‌ ಸೆಂಟರ್‌ ಉದ್ಘಾಟಿಸಿ ಅವರು ಮಾತನಾಡಿದರು. ದಿವ್ಯಾಂಗರು ಹಾಗೂ ವಿಶಿಷ್ಟ್ಯ ಚೇತನರುಗಳಿಗೆ ನಮ್ಮ ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಮೊದಲ ಹಕ್ಕಿದೆ. ಮೊದಲ ಪ್ರಾಶಸ್ತ್ಯ ದೊರಕಿಸಿಕೊಡುವ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಈಗಾಗಲೇ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಆದರೆ, ಇನ್ನು ಬಹಳಷ್ಟು ಮಾಡುವುದಿದೆ. ಈ ರೀತಿಯ ಸವಾಲು ಮತ್ತು ಸಮಸ್ಯೆಗಳನ್ನು ಹೊಂದಿರುವ ವಿಶಿಷ್ಟ್ಯ ಚೇತನದವರಿಗೆ ಇರಬೇಕಾದಂತಹ ವ್ಯವಸ್ಥೆ ಅವರಿಗೆ ಪೂರಕವಾಗಿರುವಂತೆ ಇಲ್ಲ. ಅವರು ನಡೆದಾಡುವ ಜಾಗ, ಸಾರಿಗೆ ವ್ಯವಸ್ಥೇ, ಶಿಕ್ಷಣ ಕ್ಷೇತ್ರ, ಕಟ್ಟಡದಲ್ಲಿ ಅವರಿಗೆ ಪ್ರಾಶಸ್ತ್ಯ, ಹಣಕಾಸು ಮತ್ತು ಇನ್ನಿತರೆ ಸೌಕರ್ಯಗಳು ಹೆಚ್ಚಾಗಬೇಕು. ಅದು ಕೇವಲ ದೈಹಿಕ ಅಷ್ಟೇ ಅಲ್ಲ ಮಾನಸಿಕವಾಗಿಯೂ ಸವಾಲನ್ನು ಎದುರಿಸುತ್ತಿರುವರಿಗೆ ಅನ್ವಯವಾಗುವಂತಿರಬೇಕು ಎಂದರು. 
ಇಷ್ಟು ದಿನ ನಾವುಗಳು ಮಾಡಿರುವಂತಹ ವ್ಯವಸ್ಥೆ ಅಷ್ಟು ಸರಿಯಾಗಿಲ್ಲ. ಕೇವಲ ನಾಮಕಾವಸ್ತೆ ವ್ಯವಸ್ಥೆ ಮಾಡಿದ್ದೇವೆ ಎನಿಸುತ್ತದೆ. ಎಲ್ಲರೂ ಸಂಘಟಿತ ಪ್ರಯತ್ನ ಮಾಡುವ ಮೂಲಕ ವಿಶೇಷ ಅಭಿಯಾನ ರೂಫಿಸುವ ಅಗತ್ಯತೆ ಇದೆ. ಮಕ್ಕಳಲ್ಲಿನ ಬುದ್ದಿಮತ್ತೆಗೆ ಸಂಬಂಧಿಸಿದ ನ್ಯೂನ್ಯತೆಗಳನ್ನು ಸಣ್ಣವಯಸ್ಸಿನಲ್ಲೇ ಸರಿಪಡಿಸಬಹುದಾಗಿದೆ. ಈ ನಿಟ್ಟಿನಲ್ಲಿ ಪರಿಜ್ಞಾ ಆರೋಗ್ಯ ಕೇಂದ್ರ ಅತ್ಯುತ್ತಮ ಸೇವೆ ಹಾಗೂ ಸೌಲಭ್ಯಗಳನ್ನು ನೀಡುತ್ತಿದೆ ಎಂದು ಹೇಳಿದರು. 

ಮಾಜಿ ಸಚಿವರಾದ ದಿನೇಶ್‌ ಗುಂಡೂರಾವ್‌ ಮಾತನಾಡಿ, ಮಕ್ಕಳ ಬುದ್ದಿಮತ್ತೆಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ಸಣ್ಣ ವಯಸ್ಸಿನಲ್ಲಿಯೇ ಗುರುತಿಸುವ ನಿಟ್ಟಿನಲ್ಲಿ ಪೋಷಕರು ಮುಂದಾಗಬೇಕು. ಇದರಿಂದ ಅದನ್ನು ಸರಿಪಡಿಸುವುದಕ್ಕೆ ಹೆಚ್ಚಿನ ಅವಕಾಶ ದೊರೆಯುತ್ತದೆ ಎಂದರು. 
ಕಾರ್ಯಕ್ರಮದಲ್ಲಿ ಖ್ಯಾತ ಮಕ್ಕಳ ನ್ಯೂರಾಲಜಿಸ್ಟ್‌ ಮತ್ತು ಪರಿಜ್ಮ ಮೆಡಿಕಲ್‌ ಸೆಂಟರ್‌ನ ಮುಖ್ಯಸ್ಥರಾದ ಡಾ. ಸುರೇಶ್‌ ರಾವ್‌ ಅರೂರ್‌, ಖ್ಯಾತ ಮಕ್ಕಳ ನರತಜ್ಞರಾದ ಡಾ ಸುಧೀಂದ್ರ ಅರೂರ್‌ ಉಪಸ್ಥಿತರಿದ್ದರು.